ಉಡುಪಿ: ಎಂಸಿಸಿ ಬ್ಯಾಂಕ್ನ ಸಂತೆಕಟ್ಟೆ ಶಾಖೆ ಪ್ರಾರಂಭವಾದ ಏಳು ತಿಂಗಳ ಅವಧಿಯಲ್ಲೇ ₹10 ಕೋಟಿ ವ್ಯವಹಾರ ಸಾಧಿಸಿದ ನಿಟ್ಟಿನಲ್ಲಿ ಈಚೆಗೆ ಶಾಖಾ ಆವರಣದಲ್ಲಿ ಸಂಭ್ರಮಾಚರಣೆ ಹಾಗೂ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ತೊಟ್ಟಂನ ಸಂತ ಅನ್ನಾ ಚರ್ಚ್ನ ಧರ್ಮಗುರು ಹೆನ್ರಿ ಮಸ್ಕರೇನ್ಹಸ್, ಸಮಾಜ ಸೇವಕ ರೇಮಂಡ್ ವಾಲ್ಟರ್ ಕ್ರಾಸ್ತ, ಕಿನ್ನಿಮುಲ್ಕಿಯ ಕಿದಿಯೂರು ಸಹಕಾರಿ ಸಂಘದ ನಿರ್ದೇಶಕ ನಿತಿನ್ ಪೂಜಾರಿ, ಶಾಖಾ ಸಹಾಯಕ ನಿರ್ದೇಶಕ ಜೆರಾಲ್ಡ್ ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಸಂತೆಕಟ್ಟೆ ಶಾಖೆ ಸ್ಥಾಪಕ ವ್ಯವಸ್ಥಾಪಕ ಅಜಿತ್ ಡಿಸೋಜ, ವ್ಯವಸ್ಥಾಪಕಿ ಜ್ಯೋತಿ ಬ್ಯಾರೆಟ್ಟೊ, ಎಲ್ರಾಯ್ ಕೆ. ಕ್ರಾಸ್ಟೊ, ಫ್ರೀಡಾ ಡಿಸೋಜ ಭಾಗವಹಿಸಿದ್ದರು.

ಶಾಖೆಯ 10 ಸ್ಥಾಪಕ ಗ್ರಾಹಕರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕ್ನ ಗ್ರಾಹಕರ ಮಕ್ಕಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕುಂದಾಪುರದ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಶಾಲೆ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯ ಅಗತ್ಯವಿರುವ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಬಾರ್ಕೂರಿನ ಮರಿನೋಲ್ ಹೈಸ್ಕೂಲ್ಗೆ ಕ್ರೀಡಾ ಸಾಮಗ್ರಿ ವಿತರಿಸಲಾಯಿತು.

ಮನೋಜ್ ಲೋಪೆಸ್, ಅಲ್ಡ್ರಿನ್ ಡಿಸೋಜ ಪ್ರಾರ್ಥಿಸಿದರು. ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಓವಿನ್ ರೆಬೆಲ್ಲೊ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-28-1783454284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.