ಪಡುಬಿದ್ರಿ: ಕಾಪು ಪುರಸಭೆ ವತಿಯಿಂದ ಮೂಳೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ವಿರೋಧಿಸಿ ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ, ಮೂಳೂರು ವತಿಯಿಂದ ಪ್ರತಿಭಟನೆ ನಡೆಯಿತು.

ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡದೆ ಜಮೀನನ್ನು ಹಸ್ತಾಂತರಿಸಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಆಕ್ಷೇಪ ಸಲ್ಲಿಸಲಾಗಿದ್ದು, ಈ ಪ್ರದೇಶ ಪರಿಸರ, ನೀರಿನ ಮೂಲಗಳ ದೃಷ್ಟಿಯಿಂದ ಅತಿ ಮಹತ್ವದ್ದಾಗಿದೆ ಎಂದು ಹೇಳಿದರು.

ಪ್ರಸ್ತಾವಿತ ಜಮೀನಿನಲ್ಲಿ ವರ್ಷಪೂರ್ತಿ ನೀರಿನ ಆಶ್ರಯವಿದ್ದು, ವಿಶೇಷವಾಗಿ ಬೇಸಿಗೆಯಲ್ಲಿಯೂ ನೀರು ಸಂಗ್ರಹವಿರುತ್ತದೆ. ಇಲ್ಲಿ ಅಪರೂಪದ ತಾವರೆ ಹೂಗಳು ಬೆಳೆಯುತ್ತವೆ. ಹಲವು ಪ್ರಾಣಿ– ಪಕ್ಷಿಗಳಿಗೆ ಇದು ಆಶ್ರಯ ತಾಣವಾಗಿದೆ. ಸಮೀಪದಲ್ಲಿ ಕೃಷಿ ಜಮೀನುಗಳಿದ್ದು, ಈ ಪ್ರದೇಶ ಕೃಷಿಗೆ ಫಲವತ್ತಾದ ಭೂಮಿಯಾಗಿದೆ. ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಿದಲ್ಲಿ ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಹೇಳಿದರು.

ಈ ಜಾಗದಲ್ಲಿರುವ ನೀರಿನ ಮಟ್ಟದಿಂದ ಸುತ್ತಮುತ್ತಲಿನ ಬಾವಿಗಳಲ್ಲಿಯೂ ನೀರಿನ ಲಭ್ಯತೆ ಉತ್ತಮವಾಗಿದೆ. ಒಂದು ವೇಳೆ ಈ ಹೊಂಡವನ್ನು ಕೃತಕವಾಗಿ ಮುಚ್ಚಿ ಎಸ್.ಟಿ.ಪಿ ನಿರ್ಮಿಸಿದಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಆದ್ದರಿಂದ ಪರಿಸರ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮೂಳೂರು ಪ್ರದೇಶದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಮನವಿ: ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಹಶೀಲ್ದಾರ್ ಅಂನತ ಶಂಕರ್, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರಿಗೆ ಮೂಳೂರು ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿಯವರು ಮನವಿ ಸಲ್ಲಿಸಿದರು.

ಮನೋಹರ ಅಡ್ಯಂತಾಯ ಬಿಕ್ರಿಗುತ್ತು, ಪ್ರಭಾತ್ ಶೆಟ್ಟಿ, ಪ್ರಕಾಶ್ ಅಂಚನ್, ಪುರಸಭೆ ಸದಸ್ಯರಾದ ಸತೀಶ್ಚಂದ್ರ, ಮಹಮ್ಮದ್ ಆಸೀಫ್, ಶಾಂಭವಿ ಕುಲಾಲ್, ಅಶೋಕ್ ಪುತ್ರನ್, ದೀಪಾ ಶೆಟ್ಟಿ, ಚಿತ್ತನ್ ಮೂಳೂರು, ಪುರುಷೋತ್ತಮ ಸಾಲಿಯಾನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-28-393515376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.