ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗ ಎಂಬಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ತಾಯಿ ಮಗಳ ಕೊಲೆ ಪ್ರಕರಣ ಸಂಬಂಧ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಆರ್.ಯಾನೆ ಗಣೇಶ (33) ಶಿಕ್ಷೆಗೆ ಒಳಗಾದ ಅಪರಾಧಿ.

ತಮಿಳುನಾಡು ಮೂಲದ ಚೆಲುವಿ (30) ಎಂಬುವವರಿಗೆ 15 ವರ್ಷದ ಹಿಂದೆ ಮಂಚಿಯ ಸುಬ್ರಹ್ಮಣ್ಯ ಎಂಬುವವರೊಂದಿಗೆ ಮದುವೆ ಆಗಿದ್ದು, ಮದುವೆಯ ಸಮಯದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗ ಅಲ್ಲಿ ಕೆಲಸ ಮಾಡುವ ರಶೀದ್ ಎಂಬಾತನ ಪರಿಚಯವಾಗಿತ್ತು. ನಂತರ ಸುಬ್ರಹ್ಮಣ್ಯ ಮತ್ತು ಚೆಲುವಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಚೆಲುವಿ ರಶೀದ್ನೊಂದಿಗೆ ಮುಂಬೈಗೆ ಹೋಗಿ ಅಲ್ಲಿ ಸುಮಾರು 2 ವರ್ಷ ಇದ್ದರು.

ನಂತರ ಕಾರ್ಕಳಕ್ಕೆ ಬಂದು ಅಲ್ಲಿ ಬಾಡಿಗೆ ಮನೆಯಲ್ಲಿ ರಶೀದ್ನೊಂದಿಗೆ ಇದ್ದು, ಆ ಸಮಯ ಆಕೆಗೆ ಪ್ರೀತಮ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳಾಗಿದ್ದರು. ನಂತರ ಚೆಲುವಿ ಹಾಗೂ ರಶೀದ್ ಮಧ್ಯೆ ಗಲಾಟೆಯಾಗಿ ಚೆಲುವಿ ತನ್ನ ಮಕ್ಕಳೊಂದಿಗೆ ತಾಯಿ ಮನೆಯಾದ ಆತ್ರಾಡಿ ಮದಗಕ್ಕೆ ವಾಪಸ್ ಬಂದು ಅಲ್ಲಿ ಸಮೀಪ ಶೆಡ್ಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು.

ಹರೀಶ್ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಮದುವೆ ಆಗುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದನು. ಚೆಲುವಿಯು ಬೇರೆ ಗಂಡಸರೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವ ಬಗ್ಗೆ ಸಂಶಯದಿಂದ 2022ರ ಮೇ 8ರಂದು ರಾತ್ರಿ ಆತ ಚೆಲುವಿಯನ್ನು ಕುತ್ತಿಗೆಗೆ ಶಾಲು ಬಿಗಿದು ಕೊಲೆ ಮಾಡಿದ್ದ. ಬಳಿಕ ನಿದ್ರೆಯಲ್ಲಿದ್ದ ಆಕೆಯ ಮಗಳನ್ನು ಕೂಡ ಕುತ್ತಿಗೆಗೆ ಶಾಲು ಬಿಗಿದು ಕೊಲೆ ಮಾಡಿದ್ದನು.

ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಆರೋಪಿಗೆ ₹ 20 ಸಾವಿರ ದಂಡವನ್ನೂ ವಿಧಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-28-2074114069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.