ಉಡುಪಿ: ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬಹುದಾದ ಅಣಬೆ ಕೃಷಿಯತ್ತ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲೂ ಹಲವರು ಆಸಕ್ತಿ ತೋರುತ್ತಿದ್ದರೂ ಇಲ್ಲಿ ಹವಾಮಾನವೇ ದೊಡ್ಡ ಸವಾಲಾಗಿ ಕಾಡುತ್ತಿದೆ.

ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಅಣಬೆ ಕೃಷಿಕರಿದ್ದಾರೆ. ಆಯಿಸ್ಟರ್ ತಳಿಯ ಅಣಬೆಯನ್ನೇ ಹೆಚ್ಚಿನವರು ಬೆಳೆಯುತ್ತಿದ್ದು, ಈ ಅಣಬೆ ಬೆಳೆಗೆ ತಾಪಮಾನ ಏರಿಕೆಯು ಮಾರಕವಾಗಿ ಪರಿಣಮಿಸುತ್ತಿದೆ.

ಕರಾವಳಿಯಲ್ಲಿ ಫೆಬ್ರುವರಿ ತಿಂಗಳಿನಿಂದಲೇ ಬಿಸಿಲಿನ ಬೇಗೆ ಹೆಚ್ಚಾಗುವುದರ ಜೊತೆಗೆ ತಾಪಮಾನವೂ ಏರಿಕೆಯಾಗಲು ಆರಂಭವಾಗುತ್ತದೆ. ಈ ಕಾರಣಕ್ಕೆ ಏಪ್ರಿಲ್, ಮೇ ತಿಂಗಳಲ್ಲಿ ಅಣಬೆ ಬೆಳೆಗಾರರು ಅಣಬೆ ಕೃಷಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಮತ್ತೆ ಮಳೆ ಬಂದು ತಾಪಮಾನ ಕಡಿಮೆಯಾದ ಬಳಿಕವೇ ಬೆಳೆ ಪ್ರಾರಂಭಿಸುತ್ತಾರೆ.

ಮೈಸೂರು, ಬೆಂಗಳೂರು ಮೊದಲಾದೆಡೆ ತಾಪಮಾನ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅಲ್ಲಿ ವರ್ಷವಿಡೀ ಅಣಬೆ ಬೆಳೆಯಬಹುದು ಆದರೆ ಕರಾವಳಿಯಲ್ಲಿ ಕೆಲವು ಮಿತಿಗಳಿವೆ ಎನ್ನುತ್ತಾರೆ ಅಣಬೆ ಬೆಳೆಗಾರರು.

ಹೋಟೆಲ್ಗಳಲ್ಲಿ ಅಣಬೆಯ ಖಾದ್ಯಗಳಿಗೆ ಬೇಡಿಕೆ ಕುದುರುತ್ತಿದ್ದರೂ ಉಡುಪಿಯಲ್ಲಿ ಅಣಬೆ ಬೆಳೆಯುವವರಿಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಹೆಚ್ಚಿನವರು ತಾವು ಬೆಳೆದ ಅಣಬೆಯನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ.

ಜಿಲ್ಲೆಯ ಅಣಬೆ ಬೆಳೆಗಾರರು ಮೈಸೂರು, ಬೆಂಗಳೂರು ಮೊದಲಾದೆಡೆಗಳಿಂದ ಅಣಬೆಯ ಬೀಜಗಳನ್ನು ತರಿಸಿ ಕೃಷಿ ಮಾಡುತ್ತಾರೆ. ಅಣಬೆ ಬೀಜ ಕೆ.ಜಿ.ಗೆ ₹100ರಿಂದ ₹120 ಇದೆ ಎನ್ನುತ್ತಾರೆ ಬೆಳೆಗಾರರು.

‘ಒಂದು ಕೆ.ಜಿ. ಬೀಜದಿಂದ ಸುಮಾರು ಐದು ಕೆ.ಜಿ.ಯಷ್ಟು ಅಣಬೆ ಇಳುವರಿ ಪಡೆಯಬಹುದು. ಸದ್ಯ ಕೆ.ಜಿ. ಅಣಬೆಗೆ ₹250 ರಿಂದ ₹300 ದರವಿದೆ’ ಎಂದು ಮಾರಣಕಟ್ಟೆಯ ಅಣಬೆ ಬೆಳೆಗಾರ ರತ್ನಾಕರ್ ನಾಯ್ಕ್ ತಿಳಿಸಿದರು.

‘ಒಮ್ಮೆ ಅಣಬೆ ಬೀಜ ಹಾಕಿದರೆ ಮೂರು ಸಲ ಕೊಯ್ಲು ಸಿಗುತ್ತದೆ. ಬೇಡಿಕೆಗೆ ಅನುಗುಣವಾಗಿ ನಾವು ಅಣಬೆ ಬೆಳೆಯುತ್ತೇವೆ. ಕೊಯ್ಲಿನ ಬಳಿಕ ಆ ಅಣಬೆಯನ್ನು ಹೆಚ್ಚು ದಿನ ಇರಿಸಲು ಆಗುವುದಿಲ್ಲ. ಇದು ಕೂಡ ಸವಾಲಾಗಿ ಕಾಡುತ್ತದೆ’ ಎಂದೂ ಅವರು ತಿಳಿಸಿದರು.

‘ಜಿಲ್ಲೆಯಲ್ಲಿ ಅಣಬೆ ಬೆಳೆಯುವವರು ಶಿವಮೊಗ್ಗದಲ್ಲಿ ತರಬೇತಿ ಪಡೆಯುತ್ತಾರೆ. ಕೆಲವರು ಯೂಟ್ಯೂಬ್ ನೋಡಿಯೂ ಅಣಬೆ ಕೃಷಿ ಮಾಡಿದ್ದಾರೆ’ ಎಂದರು.

‘ವಾತಾವರಣದ ಬದಲಾವಣೆಗೆ ಪೂರಕವಾಗಿ ಅಣಬೆ ತಳಿಗಳನ್ನು ಬದಲಿಸಿ ಬೆಳೆಯುವ ಮೂಲಕ ಲಾಭ ಪಡೆಯಬಹುದು. ಮಿಲ್ಕಿ ತಳಿಯ ಅಣಬೆಗೆ ಹೋಟೆಲ್ಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆ ತಳಿಯನ್ನು ಬೆಳೆದರೆ ಮಾರುಕಟ್ಟೆ ಸಮಸ್ಯೆಯೂ ಹೆಚ್ಚಾಗಿ ಕಾಡದು’ ಎನ್ನುತ್ತಾರೆ ಉಚ್ಚಿಲದ ಅಣಬೆ ಕೃಷಿ ತರಬೇತುದಾರೆ ಸುಶೀಲಾ.

ಅಡಿಕೆ, ಭತ್ತ ಮೊದಲಾದ ಕೃಷಿಯನ್ನು ಮಾಡುವವರು ಉಪ ಕಸುಬಾಗಿ ಅಣಬೆ ಬೆಳೆಯಬಹುದು. ಹೆಚ್ಚು ಶ್ರಮ ಹಾಕಿದರೆ ಉತ್ತಮ ಲಾಭ ಪಡೆಯಬಹುದು
ರತ್ನಾಕರ, ಅಣಬೆ ಬೆಳೆಗಾರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-28-105978654

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.