ಉಡುಪಿ: ವ್ಯಕ್ತಿಯೊಬ್ಬರಿಂದ ಆನ್ಲೈನ್ ಮೂಲಕ ಹಣ ಪಡೆದು ಮಹಿಳೆಯೊಬ್ಬರು ವಂಚಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಲೇಡಿಹಿಲ್ನಲ್ಲಿ ಶೆಫ್ ಆಗಿ ಕೆಲಸ ಮಾಡುವ ಪಾಂಡು ಕರಿಯಪ್ಪ ಪೂಜಾರಿ ಎಂಬುವರಿಗೆ ವಾಟ್ಸ್ಆ್ಯಪ್ ಮೂಲಕ ಏಮಿಲ್ಡಾ ವಿಲಿಯಂ ಎಂಬುವರು ಪರಿಚಯವಾಗಿದ್ದು, ತಾನು ಲಂಡನ್ ನಿವಾಸಿ ಎಂದು ಆಕೆ ತಿಳಿಸಿದ್ದಾಳೆ. ಇಬ್ಬರೂ ಪರಸ್ಪರ ಚಾಟ್ ಮಾಡಿದ್ದು, ಭಾರತದಲ್ಲಿ ಕಾಸ್ಮೆಟಿಕ್, ಹೋಟೆಲ್ ವ್ಯವಹಾರ ಮಾಡುತ್ತೇನೆ. ನಿಮ್ಮನ್ನು ಭೇಟಿ ಮಾಡಲು ಮಂಗಳೂರಿಗೆ ಬರುತ್ತೇನೆ ಎಂದೂ ಹೇಳಿದ್ದಾಳೆ.

ಏ. 7ರಂದು ಏಮಿಲ್ಡಾ ವಿಲಿಯಂ ಲಂಡನ್ನಿಂದ ದೆಹಲಿಗೆ ಬರುವ ವಿಮಾನದ ಟಿಕೆಟ್ ಅನ್ನು ವಾಟ್ಸ್ಆ್ಯಪ್ ಮೂಲಕ ಪಾಂಡು ಅವರಿಗೆ ಕಳುಹಿಸಿದ್ದಳು. 8ರಂದು ಪಾಂಡು ಅವರ ಮೊಬೈಲ್ಗೆ ಮಹಿಳೆಯೊಬ್ಬರು ಕರೆಮಾಡಿ ನಿಮ್ಮ ಸ್ನೇಹಿತೆ ಏಮಿಲ್ಡಾ ವಿಲಿಯಂ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ₹5 ಕೋಟಿ ಡಿಮಾಂಡ್ ಡ್ರಾಫ್ಟ್, ಅಧಿಕ ವಸ್ತುಗಳನ್ನು ಹೊಂದಿದ್ದಾಳೆ. ಈ ಸಂಬಂಧ ನೀವು ಕೂಡಲೇ ₹70 ಸಾವಿರ ರೂಪಾಯಿ ಕಟ್ಟುವಂತೆ ಹೇಳಿದ್ದಳು. ಬಳಿಕ ಪಾಂಡು ಅವರು ಒಟ್ಟು ₹1.13 ಲಕ್ಷ ಹಣ ಸ್ಕ್ಯಾನರ್ ಮೂಲಕ ಪಾವತಿಸಿದ್ದರು ಎಂದು ದೂರಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-28-544583100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.