‘ಪಚ್ಚಿಲೆ ಗೂಡಿಗೆ ಜಿಐ ಪೈಪ್ ಬಳಕೆ’
‘ಹೊಳೆಯಲ್ಲಿ ಪಚ್ಚಿಲೆಯ ಗೂಡು ನಿರ್ಮಿಸಲು ಮೊದಲು ಬಿದಿರನ್ನು ಹೆಚ್ಚು ಬಳಸಲಾಗುತ್ತಿತ್ತು. ಈಗ ಬಿದಿರಿನ ಅಭಾವ ಇರುವುದರಿಂದ ಕಬ್ಬಿಣದ ಜಿಐ ಪೈಪ್‌ಗಳನ್ನು ಬಳಸುತ್ತೇವೆ. ಇದು ಹೆಚ್ಚು ಬಾಳ್ವಿಕೆ ಬರುತ್ತದೆ’ ಎನ್ನುತ್ತಾರೆ ಕುಂದಾಪುರ ಪಚ್ಚಿಲೆ ಕೃಷಿಕ ರವಿಕಾಂತ ಖಾರ್ವಿ. ‘ಹೊಳೆಯ ನೀರು ಹೆಚ್ಚು ಬಿಸಿಯಾದಾಗ, ಕಲುಷಿತವಾದಾಗ ಪೈಪ್‌ನಿಂದ ನಿರ್ಮಿಸುವ ಪಚ್ಚಿಲೆ ಗೂಡನ್ನು ಬಿಚ್ಚಿ ಬೇರೆಡೆಗೆ ಸಾಗಿಸಲು ಅನುಕೂಲವಾಗುತ್ತದೆ. ಅದರಿಂದ ಪಚ್ಚಿಲೆ ಸಾಯದಂತೆ ನೋಡಿಕೊಳ್ಳಬಹುದು’ ಎಂದು ಅವರು ಹೇಳಿದರು.