ಉಡುಪಿ: ಮನೆ ಮನೆಗೆ ಪೈಪ್ಲೈನ್ ಮೂಲಕ ಪಿ.ಎನ್.ಜಿ. ಸಂಪರ್ಕ ನೀಡುವ ಪೈಪ್ಲೈನ್ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸುವುದರೊಂದಿಗೆ ಉಡುಪಿ ನಗರದ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೈಪ್ಲೈನ್ ಕಾಮಗಾರಿಯನ್ನು ಕಳೆದ 10 ವರ್ಷಗಳಿಂದ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಪೂರ್ಣಗೊಂಡಿಲ್ಲ. ಜೂನ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಪಿ.ಎನ್.ಜಿ. ಸಂಪರ್ಕ ಪಡೆಯಲು ಆಸಕ್ತಿ ಇರುವ ಸಾರ್ವಜನಿಕರಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕುರಿತ ಮಾಹಿತಿಯನ್ನು ಬ್ಯಾನರ್, ಕರಪತ್ರ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ಮಾಡುವಂತೆ ಅನಿಲ ಕಂಪನಿ ಪ್ರತಿನಿಧಿಗಳಿಗೆ ಸಂಸದರು ಸೂಚಿಸಿದರು.

ನಗರ ಸಭಾ ವ್ಯಾಪ್ತಿಯಲ್ಲಿ ಅಂದಾಜು 35 ಸಾವಿರ ಮನೆಗಳಿಗೆ ಅನಿಲ ಸರಬರಾಜು ಆಗಬೇಕಾಗಿದ್ದು, ಪ್ರಸ್ತುತ 1,500 ಮನೆಗಳಿಗೆ ಪೈಪ್ಲೈನ್ ಸಿದ್ದವಾಗಿರುವುದಾಗಿ ವಿವರಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 11 ಸಿಎನ್ಜಿ ವಿತರಣಾ ಘಟಕವಿದ್ದು, ಹೊಸದಾಗಿ ಮುನಿಯಾಲು, ಎರ್ಮಾಳು ಪ್ರದೇಶದಲ್ಲಿ ಘಟಕ ಮಂಜೂರು ಮಾಡಲು ಪತ್ರ ಬರೆದಿರುವುದಾಗಿದೆ ಸಂಸದರು ತಿಳಿಸಿದರು.

ಪ್ರಸ್ತುತ ಸಮಾರಂಭಗಳು ಹೆಚ್ಚಾಗಿರುವ ಕಾರಣ ಬೇಡಿಕೆಗೆ ಅನುಗುಣವಾಗಿ ಸಿಎನ್ಜಿ ಪೂರೈಕೆಗೆ ಈಗಿರುವ 17 ಟ್ರಕ್ ಗಿಂತ ಹೆಚ್ಚು ವಾಹನ ನೀಡಬೇಕೆಂದು ಸಿಎನ್ಜಿ ಗ್ಯಾಸ್ ವಿತರಕರು ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು ಅದಾನಿ ಮತ್ತು ಗೇಲ್ ಕಂಪನಿಯವರು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು. ಜಿಲ್ಲೆಗೆ 10 ಹೆಚ್ಚುವರಿ ಲೋಡ್ ಸಿಎನ್ಜಿ ಒದಗಿಸಲು ಕ್ರಮ ವಹಿಸುವಂತೆ ಹಾಗೂ ಇಂಧನವನ್ನು ಲೋಡ್ ಮಾಡುವಾಗ ನಿಯಮವನ್ನು ಪಾಲಿಸುವಂತೆ ಸೂಚಿಸಿದರು.

ಸಿಎನ್ಜಿ ವಿತರಕರು ಮೆಸ್ಕಾಂ ಬಿಲ್ಗಳನ್ನು ಮರುಪಾವತಿಸಲು ಅದಾನಿ ಕಂಪನಿಯವರು 3 ರಿಂದ 4 ತಿಂಗಳು ವಿಳಂಬ ಮಾಡುತ್ತಿದ್ದಾರೆಂದು ದೂರು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಅನಿಲ ಕಂಪನಿಯವರಿಗೆ ಸೂಚಿಸಿದರು.

ಜಿಲ್ಲೆಯ ರಿಕ್ಷಾ ಚಾಲಕರು ಆಟೊಗಳಿಗೆ ಸಿಎನ್ಜಿ ಹಾಕಿಸಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ಸಿಎನ್ಜಿ ಸಾಗಣೆ ಮಾಡಲು 4 ಜಂಬೋ ವಾಹನವನ್ನು ಒದಗಿಸಿದ್ದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅನಿಲ ಕಂಪನಿ ಪ್ರತಿನಿಧಿಗಳಿಗೆ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ಅದಾನಿ, ಗೇಲ್ ಕಂಪನಿ ಪ್ರತಿನಿಧಿಗಳು, ಸಿಎನ್ಜಿ ಬಂಕ್ ಮಾಲೀಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-28-1166441968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.