ಉಡುಪಿ: ಜಿಲ್ಲೆಯ ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಗೆ ಬೀಗ ಹಾಕಿ ಹೊರಗೆ ಹೋದಾಗ, ಅಂತಹ ಮನೆಗಳ ಮೇಲೆ ನಿಗಾ ಇಡಲು ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (ಎಲ್ಎಚ್ಬಿಎಸ್) ಕಾರ್ಯಕ್ರಮ ಆರಂಭಿಸಲಾಗಿದೆ.

ಬೀಗ ಹಾಕಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಆ ಮನೆ ಇರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಠಾಣಾ ಬೀಟ್ ಸಿಬ್ಬಂದಿಯು ಮನೆಗೆ ಭೇಟಿ ನೀಡಿ ರಾತ್ರಿ ಮತ್ತು ಹಗಲು ವೇಳೆ ಆ ಮನೆಗೆ ಸೂಕ್ತ ಭದ್ರತೆ ಮತ್ತು ಸುರಕ್ಷತೆ ಖಚಿತಪಡಿಸಲಿದ್ದಾರೆ.

ಜಿಲ್ಲೆಯ ಯಾವುದೇ ಸಾರ್ವಜನಿಕರು ತಾವು ಮನೆಯಿಂದ ಪ್ರವಾಸ ಮತ್ತು ಇತರೇ ಕಾರ್ಯಕ್ರಮಗಳಿಗಾಗಿ ಮನೆಗೆ ಬೀಗ ಹಾಕಿ ಹೊರಡುವಾಗ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಈ ಬಗ್ಗೆ ನೀಡಲಾದ ವಿಶೇಷ ದೂರವಾಣಿ ಸಂಖ್ಯೆ 0820– 2526709 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ನಿಯಂತ್ರಣ ಕೊಠಡಿಯಿಂದ ನೀಡುವ ವಾಟ್ಸ್ಆ್ಯಪ್ ಸಂಖ್ಯೆಗೆ ಮನೆಯಿಂದ ತೆರಳುವ ಮತ್ತು ಮರಳಿ ಬರುವ ದಿನಾಂಕ ಹಾಗೂ ಸಮಯ, ಮನೆಯ ನಿಖರವಾದ ವಿಳಾಸ ಹಾಗೂ ಮನೆಯ ಮುಂಭಾಗ ನಿಂತು ತೆಗೆದ ಒಂದು ಸೆಲ್ಫಿ ಫೋಟೊವನ್ನು ನೀಡಬೇಕು.

ನಂತರ ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಈ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆ ಮನೆಯ ವ್ಯಾಪ್ತಿಯ ಬೀಟ್ ಸಿಬ್ಬಂದಿಗೆ ಸೂಚನೆ ನೀಡಲಾಗುವುದು. ನಂತರ ಈ ಮನೆಯನ್ನು ವಾಟ್ಸ್ಆ್ಯಪ್ ವಿವರದಲ್ಲಿ ನೀಡಲಾದ ನಿಗದಿತ ದಿನಾಂಕ ಮತ್ತು ಸಮಯದವರೆಗೆ ಭದ್ರತೆ, ಸುರಕ್ಷತೆ ಖಚಿತಪಡಿಸಲಾಗುತ್ತದೆ ಎಂದಿದ್ದಾರೆ.

ಈ ಸೌಲಭ್ಯವು ಕೇವಲ ಸ್ವಂತ ಅಥವಾ ವೈಯಕ್ತಿಕ ಮನೆಗಳಿಗೆ ಮಾತ್ರ ಲಭ್ಯವಿದ್ದು, ಬಹುಮಹಡಿ ಫ್ಲಾಟ್ಗಳಿಗೆ ಅನ್ವಯಿಸುವುದಿಲ್ಲ. ಯಾವುದೇ ಅಧಿಕೃತವಲ್ಲದ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ನಿಮ್ಮ ಮನೆಯ ವಿವರ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದೂ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-29-711450877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.