ಉಡುಪಿ: ಬಡನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದ ವಾಣಿಜ್ಯ ಏಕವಿನ್ಯಾಸ ನಕ್ಷೆ ಲಭಿಸಿದ ಕಾರಣ ಮಾಜಿ ಶಾಸಕ ಕೆ. ರಘುಪತಿ ಭಟ್ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ಎರಡನೇ ದಿನವಾದ ಮಂಗಳವಾರ ಅಂತ್ಯಗೊಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಜೆ. ಅವರು, ತಾತ್ಕಾಲಿಕ ಏಕ ವಿನ್ಯಾಸ ನಕ್ಷೆಯನ್ನು ಧರಣಿ ಸ್ಥಳಕ್ಕೆ ಬಂದು ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಮಹೇಶ್ ಜೆ. ಅವರು, ‘ಬಡನಿಡಿಯೂರು ಗ್ರಾಮದ ಜಾಗದ ವಿಚಾರವಾಗಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದ್ದ ಕಾರಣಕ್ಕೆ ವಕೀಲರಿಂದ ಅಭಿಪ್ರಾಯ ಪಡೆದು ತಾತ್ಕಾಲಿಕ ಏಕವಿನ್ಯಾಸ ನಕ್ಷೆಯನ್ನು ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದ್ದೇವೆ. ರಸ್ತೆಯನ್ನು ಹಸ್ತಾಂತರಿಸಿದ ಬಳಿಕ ಅವರಿಗೆ ಅಂತಿಮ ಆದೇಶ ನೀಡಲಾಗುವುದು’ ಎಂದರು.

ಏಕವಿನ್ಯಾಸ ನಕ್ಷೆಗೆ ಅನುಮೋದನೆ ಲಭಿಸಿದ ಬಳಿಕ ಮಾತನಾಡಿದ ರಘುಪತಿ ಭಟ್, ‘ಏಕ ವಿನ್ಯಾಸ ನಕ್ಷೆಗೆ ತಾತ್ಕಾಲಿಕವಾಗಿ ಅನುಮೋದನೆ ಕೊಟ್ಟಿದ್ದಾರೆ. ಮೂರು ತಿಂಗಳಲ್ಲಿ ಸಿಗಬೇಕಾದುದು ನನಗೆ 24 ತಿಂಗಳ ಬಳಿಕ ಧರಣಿ ಕೂತು ಸಿಕ್ಕಿದೆ’ ಎಂದರು.

‘ಕಾನೂನು ಪ್ರಕಾರ ಸರಿ ಇದ್ದ ಕಾರಣ ನನಗೆ ಏಕವಿನ್ಯಾಸ ನಕ್ಷೆಗೆ ತಾತ್ಕಾಲಿಕವಾಗಿ ಅನುಮೋದನೆ ಸಿಕ್ಕಿದೆ. ನನ್ನ ಜಾಗ ಕಾನೂನು ಬಾಹಿರವಾದುದು ಎನ್ನುವವರಿಗೆ ಇದೇ ಉತ್ತರ’ ಎಂದು ಹೇಳಿದರು.

‘ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಅವ್ಯವಸ್ಥೆಗಳಿವೆ. ಟಿಡಿಆರ್ ಸಿಗದೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಯನ್ನು ಮುಂದಿನ ತಿಂಗಳ 12ರೊಳಗೆ ಪರಿಹರಿಸದಿದ್ದಲ್ಲಿ ಹೋರಾಟ ನಡೆಸುತ್ತೇನೆ’ ಎಂದರು.

‘ಶಾಸಕ ಯಶ್ಪಾಲ್ ಸುವರ್ಣ ಅವರು ಈ ವಿಚಾರದಲ್ಲಿ ಅಧಿಕಾರಿಗಳ ಮೂಲಕ ತೊಂದರೆ ಮಾಡಿದ್ದಾರೆ’ ಎಂದು ರಘುಪತಿ ಭಟ್ ಆರೋಪಿಸಿದ್ದರು.

ರಘಪತಿ ಭಟ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಂಗಳವಾರವೂ ಧರಣಿ ಸ್ಥಳದಲ್ಲಿ ಸೇರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-28-1417265633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.