ಭಾನುವಾರ, ಆಗಸ್ಟ್ 18, 2019
25 °C

ಉಡುಪಿ: ಮುಂದುವರಿದ ಮಳೆ

Published:
Updated:

ಉಡುಪಿ: ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಬಿರುಸಾಗಿ ಮಳೆ ಸುರಿಯುತ್ತಿದೆ. ದಿನವಿಡೀ ಎಡೆಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಬಿದ್ದಿವೆ.

ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ ಗರಿಷ್ಠ 101.9 ಮಿ.ಮೀ, ಕುಂದಾಪುರದಲ್ಲಿ 99.2, ಕಾರ್ಕಳದಲ್ಲಿ 86.7 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 96.20 ಮಿ.ಮೀ ಮಳೆ ಬಿದ್ದಿದೆ.

ಶನಿವಾರ ದಿನವಿಡೀ ಮೋಡಕವಿದ ವಾತಾವರ ನಿರ್ಮಾಣವಾಗಿತ್ತು. ಬೆಳಿಗ್ಗಿನಿಂದಲೇ ಮಳೆ ಸುರಿಯುತ್ತಲೇ ಇತ್ತು. ಪರಿಣಾಮ ಶಾಲಾ ಕಾಲೇಜು, ಕಚೇರಿಗೆ ತೆರಳುವವರಿಗೆ ಸಮಸ್ಯೆಯಾಯಿತು. 

ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲೂ ನೀರುನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ಸಂಜೆಯ ಬಳಿಕ ಮಳೆ ಕೆಲಹೊತ್ತು ಬಿಡುವು ನೀಡಿತು.

ಪಡುಬಿದ್ರಿಯಲ್ಲಿ ಬೆಳಿಗ್ಗೆ ಮಳೆ ಜೋರಾಗಿದ್ದರೆ, ಮಧ್ಯಾಹ್ನ ಕಡಿಮೆಯಾಯಿತು. ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೆರೆ ಇಳಿಮುಖವಾಯಿತು. ಆದರೆ, ಕಡಲ ಅಬ್ಬರ ಮಾತ್ರ ಜೋರಾಗಿತ್ತು. 

ಬ್ರಹ್ಮಾವರ, ಸಿದ್ದಾಪುರ, ಹೆಬ್ರಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕಾರ್ಕಳದಲ್ಲಿ ಧಾರಾಕಾರ ಮಳೆ ಸುರಿದಿದೆ. ಕುಂದಾಪುರ ಹಾಗೂ ಬೈಂದೂರಿನಲ್ಲೂ ಜೋರು ಮಳೆಯಾಗಿದೆ. ಇಡೀ ದಿನ ಮೋಡಮುಚ್ಚಿದ ವಾತಾವರಣ ಇತ್ತು.

Post Comments (+)