ಉಡುಪಿ: ‘ನಮ್ಮ ಬದುಕು ಸುಂದರವಾಗಬೇಕಾದರೆ ಧರ್ಮ ಸಹಿಷ್ಣುತೆ ಮುಖ್ಯವಾಗುತ್ತಿದೆ. ಕರಾವಳಿ ಭಾಗದ ಜನರು ಧಾರ್ಮಿಕತೆಯ ಜೊತೆಗೆ ಧರ್ಮ ಸಹಿಷ್ಣತೆಗೂ ಹೆಚ್ಚು ಒತ್ತು ನೀಡುತ್ತಾರೆ’ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಬದುಕು ಶಾಶ್ವತವಲ್ಲ. ಯಾವಾಗ ಬೇಕಾದರೂ ಜಗತ್ತನ್ನು ಬಿಟ್ಟು ಹೋಗಬೇಕಾದೀತು. ಆದರೆ ನಾವು ಮಾಡುವ ಕಾರ್ಯಗಳು, ಸೇವೆಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದರು.

‘ಅವಿಭಜಿತ ದಕ್ಷಿಣ ಕನ್ನಡದವರು ಪ್ರತಿಯೊಬ್ಬರನ್ನೂ ಗೌರವದಿಂದ ನೋಡುತ್ತಾರೆ. ಅದಕ್ಕೆ ಇಲ್ಲಿನ ಧಾರ್ಮಿಕ ನೆಲೆಗಟ್ಟೇ ಕಾರಣ’ ಎಂದು ಹೇಳಿದರು.

‘ನಾರಾಯಣ ಗುರುಗಳು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೂಲಕ ನಮಗೆ ಧಾರ್ಮಿಕ ಸ್ವಾತಂತ್ರ್ಯ ಲಭಿಸಿದೆ’ ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ‘ದೇವರನ್ನು ಆರಾಧಿಸುವುದರಿಂದ ನಮಗೆ ಮನಃಶಾಂತಿ ಲಭಿಸುತ್ತದೆ. ಸಾರ್ವತ್ರಿಕವಾಗಿ ದೇವರನ್ನು ಆರಾಧಿಸುವುದರಿಂದ ಸಮಾಜದಲ್ಲಿ ಪ್ರಸನ್ನತೆ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಜಿ. ಎಸ್. ಚಂದ್ರಶೇಖರ್ ಮಾತನಾಡಿ, ‘ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಕಷ್ಟು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗುತ್ತವೆ. ಅಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ’ ಎಂದರು.

‘ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ದಿನಮಾನದಲ್ಲಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ’ ಎಂದರು.

‘ಇಂದು ಸ್ವ ಪ್ರತಿಷ್ಠೆಗಾಗಿ ಜಗತ್ತಿನ ವಿವಿಧೆಡೆ ಯುದ್ಧಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತವೇ ಹೆಚ್ಚು ಸುರಕ್ಷಿತ ದೇಶವಾಗಿದೆ. ಉತ್ತಮ ಸಂಸ್ಕೃತಿಯಿಂದ ಅದು ಸಾಧ್ಯವಾಗಿದೆ’ ಎಂದು ಹೇಳಿದರು.

ಪ್ರಮುಖರಾದ ರಮೇಶ್ ಕಾಂಚನ್, ಮಹೇಶ್ ಠಾಕೂರ್, ಶ್ರೀಕಾಂತ್ ಉಪಾಧ್ಯ, ಆನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-28-2087833887

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.