ಪಡುಬಿದ್ರಿ: ಮಹಿಳೆಯರು ಅನಗತ್ಯ ವಿಚಾರಗಳತ್ತ ಗಮನ ಹರಿಸದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ ಉಡುಪಿ ಹೇಳಿದರು.

ಕಾಪು ತಾಲ್ಲೂಕಿನ ಇನ್ನಂಜೆ ಮಹಿಳಾ ಮಂಡಲದ ವತಿಯಿಂದ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಸೇವೆ ಮಾಡಲು ದುಡ್ಡಿದ್ದವರಿಂದ ಮಾತ್ರ ಸಾಧ್ಯ ಎಂದು ಕೆಲವರು ತಿಳಿದಿದ್ದಾರೆ. ಆದರೆ ದುಡ್ಡಿಲ್ಲದೆಯೂ ಸಮಾಜ ಸೇವೆ ಮಾಡಬಹುದಾಗಿದೆ. ನೆರೆಮನೆಯಲ್ಲಿ ಒಂಟಿ ಜೀವಗಳಿದ್ದರೆ ಅವರನ್ನು ಕಂಡು ಮಾತನಾಡಿಸುವುದು, ಅವರಿಗೆ ಅನಾರೋಗ್ಯವಾದಾಗ ಹೋಗಿ ಒಂದಿಷ್ಟು ಅನ್ನ ತಿನ್ನಿಸುವುದೂ ಸಮಾಜಸೇವೆಯಾಗಿದೆ ಎಂದು ತಿಳಿಸಿದರು.

ಉಡುಪಿ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ, ಯಾವುದೇ ಒಂದು ಸಂಘಟನೆಯನ್ನು ಆರಂಭಿಸುವುದು ಕಷ್ಟವೇನಲ್ಲ. ಆದರೆ ಅದನ್ನು ಮುಂದುವರಿಸುವುದು ಕಷ್ಟ. ಸಂಘಟನೆಯಲ್ಲಿ ಕೈಜೋಡಿಸಿರುವ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರ್ಥೈಸಿಕೊಂಡು, ದುಡಿದಾಗ ಮಾತ್ರ ಆ ಸಂಘಟನೆ ಬಲಯುತವಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮವನ್ನು ಪರಿಮಳಾ ಮಿತ್ತಂತಾಯ ಉದ್ಘಾಟಿಸಿದರು. ಮಹಿಳಾ ಮಂಡಳಿ ಅಧ್ಯಕ್ಷೆ ಸಖೂ ನಂದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ಸ್ಥಳೀಯ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಮಾರ್ಗರೇಟ್ ಸೀಮಾ ಡಿಸೋಜ ಅವರು ವಂದಿಸಿದರು.

ಮಹಿಳಾ ಮಂಡಳಿಯ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಶ್ವೇತಾ ಎಲ್ ಶೆಟ್ಟಿ, ಗೌರವಾಧ್ಯಕ್ಷೆ ಪುಷ್ಪಾ ರವೀಂದ್ರ ಶೆಟ್ಟಿ,ಕೋಶಾಧಿಕಾರಿ ಅನಿತಾ ಮಥಾಯಸ್ ಉಪಸ್ಥಿತರಿದ್ದರು .

ಸುಲೋಚನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಮಹಿಳೆಯರ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-28-613697491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.