ಉಡುಪಿ: ನಾವು ಬರೆಯುವಾಗ ಎಲ್ಲಾ ಇಂದ್ರಿಯಗಳು ಕೆಲಸ ಮಾಡುತ್ತಿರುತ್ತವೆ. ಎಲ್ಲಾ ಇಂದ್ರಿಯಗಳಿಂದ ನಾವು ಕೃಷ್ಣನ ಸ್ಮರಣೆ ಮಾಡಬೇಕೆನ್ನುವ ಉದ್ದೇಶದಿಂದ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞ ಆರಂಭಿಸಲಾಗಿದೆ ಎಂದು ಪರ್ಯಾಯ ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.

ಪರ್ಯಾಯ ಶೀರೂರು ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

100 ಕೋಟಿ ಕೃಷ್ಣ ಜಪ ನಡೆಯಬೇಕೆಂಬ ಆಶಯವನ್ನು ಈ ಕಾರ್ಯಕ್ರಮ ಹೊಂದಿದೆ. ಕೃಷ್ಣ ಎಂದರೆ ಆಕರ್ಷಣೆ, ಎಲ್ಲರೂ ಈ ಮೂಲಕ ಕೃಷ್ಣನ ಕಡೆಗೆ ಆಕರ್ಷಿತರಾಗಬೇಕು ಎಂದರು.

ಇಸ್ಕಾನ್ ಬೆಂಗಳೂರು ಉಪಾಧ್ಯಕ್ಷ ಚಂಚಲಪತಿ ದಾಸರು ಮಾತನಾಡಿ, ಕೃಷ್ಣನ ನಾಮ ಜಪವು ಜೀವನವನ್ನು ಪರಿಪೂರ್ಣವಾಗಿಸುತ್ತದೆ. ಕೃಷ್ಣನನ್ನು ಸಂಪೂರ್ಣವಾಗಿ ಅರ್ಥೈಸುವುದು ಕಷ್ಟ. ಶ್ರೀಕೃಷ್ಣ ಮಂತ್ರ ಲೇಖನ ಯಜ್ಞದ ಮೂಲಕ ಎಲ್ಲರು ಭಕ್ತಿಯ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಎ.ಹರಿದಾಸ ಭಟ್ಟ ಆಚಾರ್ಯ ಉಪಸ್ಥಿತರಿದ್ದರು. ಮಠದ ದಿವಾನ ಉದಯ ಕುಮಾರ್ ಸರಳತ್ತಾಯ ಸ್ವಾಗತಿಸಿದರು. ಆನಂದತೀರ್ಥ ಆಚಾರ್ಯ ನಿರೂಪಿಸಿದರು.

ಚಂಚಲಪತಿದಾಸ್ ಅವರು ಈ ಯೋಜನೆಯ ವೆಬ್ಸೈಟ್ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.