ಉಡುಪಿ: ಪಾರ್ಶ್ವವಾಯು ಪೀಡಿತ ಕೇರಳ ಮೂಲದ ವ್ಯಕ್ತಿಯೊಬ್ಬರು ಸರ್ಕಾರಿ ಅನುದಾನಿತ ಆಶ್ರಮದಲ್ಲಿ ಆಶ್ರಯವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ವ್ಯಕ್ತಿಯ ಆರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.

ರೋಗಿಯೊಂದಿಗೆ ಆಂಬುಲೆನ್ಸ್ ಮೂಲಕವೇ ಪತ್ರಿಕಾಭವನಕ್ಕೆ ಸೋಮವಾರ ಬಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇರಳದ ಎರ್ನಾಕುಳಂ ಜಿಲ್ಲೆಯ ಮುವಾಟ್ಟುಪುಳದ ರಾಯಲ್ ಪೌಲ್ ಎಂಬುವವರು ಕೂಲಿ ಕಾರ್ಮಿಕರಾಗಿ ಕಾರ್ಕಳದ ಅನಾನಸ್ ತೋಟಕ್ಕೆ ಬಂದಿದ್ದರು. ಸುಮಾರು ಮೂರು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಪಾರ್ಶ್ವಾವಾಯುವಿಗೆ ಒಳಗಾಗಿದ್ದಾರೆ ಎಂದು ವಿವರಿಸಿದರು.

ಅನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಖಾಸಗಿ ಆಶ್ರಮದಲ್ಲಿ ಅವರಿಗೆ ಆರೈಕೆ ನೀಡಬೇಕಾದರೆ ತಿಂಗಳಿಗೆ ಸುಮಾರು ₹25 ಸಾವಿರ ಖರ್ಚು ಇದೆ. ಅದು ಭರಿಸುವುದು ಕಷ್ಟವಾಗಿದೆ. ಆದರೆ ಸರರ್ಕಾರಿ ಅನುದಾನಿತ ಆಶ್ರಮದಲ್ಲಿ ಹಾಸಿಗೆ ಹಿಡಿದ ರೋಗಿಗಳನ್ನು ದಾಖಲಾತಿ ಮಾಡಿಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಈಗ ರಾಯಲ್ ಪೌಲ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಸಂಬಂಧಿಕರನ್ನು ಹುಡುಕಾಟದ ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ ಎಂದರು.

ಕೂಡಲೇ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಎಚ್ಚೆತ್ತುಕೊಂಡು ರೋಗಿಯನ್ನು ಸರ್ಕಾರಿ ಅನುದಾನಿತ ಆಶ್ರಮಕ್ಕೆ ಸೇರಿಸಿ ಅಗತ್ಯ ಆರೈಕೆಗೆ ವ್ಯವಸ್ಥೆ ಮಾಡಬೇಕು ಅಥವಾ ಅವರನ್ನು ಖಾಸಗಿ ಆಶ್ರಮಕ್ಕೆ ಸೇರಿಸಿ ಅದರ ಶುಲ್ಕವನ್ನು ಸರ್ಕಾರವೇ ಪಾವತಿಸುವಂತೆ ಆಗಬೇಕು ಎಂದು ಒತ್ತಾಯಿಸಿದರು.

ರಾಯಲ್ ಪೌಲ್ ಮಾತನಾಡಿ,‘ನಾನು ನಾಲ್ಕು ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾರ್ಕಳದ ಅನಾನಸು ತೋಟಕ್ಕೆ ಬಂದಿದ್ದೇನೆ. ಪಾರ್ಶ್ವವಾಯು ಆದ ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿ ಹೋದ ತೋಟದ ಮಾಲೀಕರು ಅನಂತರ ತಿರುಗಿ ನೋಡಿಲ್ಲ’ ಎಂದರು.

‘ಊರಿನಲ್ಲಿ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಈಗ ಅವರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಅವರೊಂದಿಗೆ ಸಂಪರ್ಕವಿಲ್ಲ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-665110540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.