ಉಡುಪಿ ಎಸ್‌ಪಿ ವರ್ಗಾವಣೆ ಬೇಡ: ಕೋಟ

7

ಉಡುಪಿ ಎಸ್‌ಪಿ ವರ್ಗಾವಣೆ ಬೇಡ: ಕೋಟ

Published:
Updated:

ಉಡುಪಿ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

ಲಕ್ಷ್ಮಣ ನಿಂಬರಗಿ ಅವರು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಬಂದು ವರ್ಷ ಕೂಡ ಕಳೆದಿಲ್ಲ. ಜಾತಿ, ವರ್ಗ, ಧರ್ಮ, ಪಕ್ಷಗಳನ್ನು ಗಮನಿಸದೆ ಕರ್ತವ್ಯ ನಿರ್ವಹಿಸಿದ್ದಾರೆ. ಈಚೆಗೆ ನಡೆದ ಭಾರತ್ ಬಂದ್ ವೇಳೆ ಉದ್ರಿಕ್ತ ಗುಂಪನ್ನು ಚದುರಿಸಲು ಎಸ್.ಪಿ ತೆಗೆದುಕೊಂಡ ಕ್ರಮದ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೆ ಅಸಮಾಧಾನವಿದೆ. ಅವರ ವರ್ಗಾವಣೆ ಸಾಧ್ಯತೆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಸರ್ಕಾರ ಆಡಳಿತಾತ್ಮಕ ಕಾರಣಗಳನ್ನು ಹೊರತುಪಡಿಸಿ ರಾಜಕೀಯ ಪ್ರೇರಿತ ವರ್ಗಾವಣೆ ಮಾಡಬಾರದು. ರಾಜಕೀಯ ಒತ್ತಡಕ್ಕೆ ಮಣಿಬಾರದು ಎಂದು ಕೋಟ ಮನವಿಯಲ್ಲಿ ಒತ್ತಾಯಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !