ಉಡುಪಿ: ಬೇಸಿಗೆಯ ಬಿಸಿ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ನದಿಗಳ ಒಡಲು ಬರಿದಾಗುತ್ತಿರುವುದರ ಜೊತೆಗೆ ಜೀವಜಲವೂ ಮಲಿನವಾಗುತ್ತಿರುವುದು ಆತಂಕಕಾರಿಯಾಗಿದೆ.

ಉಡುಪಿ ನಗರ ವ್ಯಾಪ್ತಿಯ ಕೊಳಚೆ ನೀರು ನದಿಯ ಮೂಲಕ ಸಮುದ್ರ ಸೇರಿ ಜಲಮಾಲಿನ್ಯ ಉಂಟು ಮಾಡಿದರೆ, ವಿವಿಧೆಡೆ ಹೊಳೆಗಳಿಗೆ ಜನರು ತ್ಯಾಜ್ಯ ಎಸೆಯುವ ಮೂಲಕ ಜಲಮೂಲವನ್ನು ಕಲುಷಿತಗೊಳಿಸುತ್ತಿದ್ದಾರೆ.

ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿ ರಾತ್ರಿ ವೇಳೆ ವಾಹನಗಳಲ್ಲಿ ಬಂದು ಸೇತುವೆಯಿಂದ ನದಿಗೆ ತ್ಯಾಜ್ಯವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.

ಕೋಳಿ ಅಂಗಡಿಯ ತ್ಯಾಜ್ಯ ಸೇರಿದಂತೆ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ನದಿಗಳಿಗೆ ಎಸೆಯಲಾಗುತ್ತಿದೆ ಇದರಿಂದ ಇಡೀ ಪರಿಸರ ದುರ್ಗಂಧಮಯವಾಗುತ್ತಿದೆ. ಜೊತೆಗೆ ನದಿಯ ನೀರು ಬಳಸುವವರಿಗೆ ರೋಗಗಳನ್ನು ತರುತ್ತಿದೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಹರಿಯುವ ಇಂದ್ರಾಣಿ ನದಿಯು ಸಂಫೂರ್ಣವಾಗಿ ಕಲುಷಿತವಾಗಿದ್ದು, ಅದರ ನೀರು ಕಡಲಿಗೆ ಸೇರುವ ಮೂಲಕ ಜಲಚರಗಳಿಗೂ ಕಂಟಕವಾಗಿ ಪರಿಣಮಿಸುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ನಗರದಲ್ಲಿ ತಲೆ ಎತ್ತಿರುವ ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಕೊಳಚೆ ನೀರು ಶುದ್ಧೀಕರಿಸುವ ಘಟಕಗಳಿಲ್ಲದ ಕಾರಣ ತ್ಯಾಜ್ಯ ನೀರನ್ನು ಇಂದ್ರಾಣಿ ನದಿಗೆ ಮಳೆ ನೀರು ಹರಿಯುವ ತೋಡುಗಳ ಮೂಲಕ ಹರಿಸಲಾಗುತ್ತಿದೆ. ಅದುವೇ ಈ ನದಿಯ ದುಃಸ್ಥಿತಿಗೆ ಕಾರಣ ಎನ್ನುತ್ತಾರೆ ಪರಿಸರ ಪ್ರಿಯರು.

ಉಡುಪಿ ನಗರದಲ್ಲಿ ಇಂದ್ರಾಣಿ ನದಿ ಹರಿಯುವ ಪರಿಸರದಲ್ಲಿ ದುರ್ಗಂಧ ಹರಡಿದೆ. ಕೆಲವೆಡೆ ಕಸ, ತ್ಯಾಜ್ಯಗಳನ್ನೂ ನದಿಗೆ ಸುರಿಯಲಾಗುತ್ತಿದೆ. ನಿಟ್ಟೂರಿನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ನೀರು ಶುದ್ಧೀಕರಣಗೊಳ್ಳದ ಕಾರಣವೂ ಕೊಳಚೆ ನೀರು ಸಮುದ್ರ ಸೇರುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಜೀವಜಲವು ಮಲಿನಗೊಳ್ಳುತ್ತಿರುವುದನ್ನು ಸಂಬಂಧಪಟ್ಟವರು ನಿಯಂತ್ರಿಸಬೇಕು ಇಲ್ಲದಿದ್ದರೆ ಅಪತ್ತು ಕಾದಿದೆ ಎನ್ನುತ್ತಾರೆ ಜನರು.

‘ಮೇಲ್ದರ್ಜೆಗೇರಲಿದೆ ನಿಟ್ಟೂರು ಎಸ್ಟಿಪಿ’

ನಿಟ್ಟೂರಿನಲ್ಲಿರುವ ಕೊಳಚೆ ನೀರು ಸಂಸ್ಕರಣಾ ಘಟಕವನ್ನು (ಎಸ್ಟಿಪಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ₹30 ಕೋಟಿ ಅನುದಾನದಲ್ಲಿ ಶೀಘ್ರದಲ್ಲೇ ಮೇಲ್ದರ್ಜೆಗೇರಿಸಲಾಗುವುದು. ಸದ್ಯ ಪ್ರತಿದಿನ 12 ಎಂಎಲ್ಡಿ ನೀರನ್ನಷ್ಟೇ ಶುದ್ಧೀಕರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. 8 ಎಂಎಲ್ಡಿ ಸಾಮರ್ಥ್ಯದ ಹೊಸ ಘಟಕವನ್ನೂ ಪ್ರಾರಂಭಿಸಲಾಗುವುದು. ಆಗ ಪ್ರತಿದಿನ ಒಟ್ಟು 20 ಎಂಎಲ್ಡಿ ನೀರನ್ನು ಶುದ್ಧೀಕರಿಸಬಹುದು. ಇದರಿಂದ ನದಿ ಮಲಿನವಾಗುವುದೂ ನಿಲ್ಲಬಹುದು ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ಕೊಳಚೆ ನೀರನ್ನು ಶುದ್ದೀಕರಿಸದೆ ನದಿಗಳಿಗೆ ಬಿಡುವ ಅಪಾರ್ಟ್ಮೆಂಟ್ನವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕ್ರಮ ಕೈಗೊಳ್ಳಲಿದೆ. ನಗರಸಭೆಯಿಂದಲೂ ದಂಡ ವಿಧಿಸಲಾಗುವುದು. ಮಳೆ ನೀರು ಹರಿಯುವ ತೋಡಿಗೆ ತ್ಯಾಜ್ಯ ನೀರು ಹರಿಸುವುದು ನಿಂತರೆ ಇಂದ್ರಾಣಿ ನದಿಯು ಮಲಿನಗೊಳ್ಳುವುದು ನಿಲ್ಲಬಹುದು ಎಂದರು.

ಕಾಮಿನಿ ನದಿ ಒಡಲಲ್ಲಿ ಕಸ

ಪಡುಬಿದ್ರಿ: ಇಲ್ಲಿ ಹರಿಯುವ ಕಾಮಿನಿ ನದಿ ಕಸದ ಎಸೆತದಿಂದ ಮಲಿನವಾಗುತ್ತಿದೆ. ಈ ನದಿಯು ಎಲ್ಲೂರಿನಲ್ಲಿರುವ ದಳಂತ್ರ ಕೆರೆಯಿಂದ ಉಗಮವಾಗಿ ಎರ್ಮಾಳು ಮೂಲಕ ಪಡುಬಿದ್ರಿಯ ಎಂಡ್ ಪಾಯಿಂಟ್ನಲ್ಲಿ ಸಮುದ್ರ ಸೇರುತ್ತದೆ. ತ್ಯಾಜ್ಯ, ಕಸ ಎಸೆಯುವುದು, ಪ್ಲಾಸ್ಟಿಕ್ ರಾಶಿ, ಒಳಚರಂಡಿ ನೀರಿನ ಸೇರ್ಪಡೆ ಇವು ನದಿ ಮಲಿನವಾಗಲು ಪ್ರಮುಖ ಕಾರಣ. ಅದರ ಪರಿಣಾಮವಾಗಿ ನೀರಿನ ಗುಣಮಟ್ಟ ಕುಸಿದಿದ್ದು, ಜಲಚರಗಳಿಗೂ ಅಪಾಯ ಎದುರಾಗಿದೆ. ಪರಿಸರದ ಸಮತೋಲನಕ್ಕೂ ಹಾನಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳ್ ಮೂಲಕ ಹಾದು ಹೋಗುವ ಈ ನದಿಗೆ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕಸ ಎಸೆಯುವುದು ಕಂಡುಬಂದಿದ್ದು, ಈ ಕಾರಣಕ್ಕೆ ಎರ್ಮಾಳು ತೆಂಕ ಪಂಚಾಯಿತಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದೆ.

‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ’

ಬೈಂದೂರು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲು ಬಿಜೂರು ಸುಮನಾವತಿ ನದಿ ಸೇರಿದಂತೆ ಚಿಕ್ಕ ಚಿಕ್ಕ ನದಿಗಳಿಗೆ ಹಾಗೂ ನದಿಗೆ ಸೇರುವ ತೋಡುಗಳಿಗೆ ಕೋಳಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ಅದನ್ನು ಗಂಭಿರವಾಗಿ ಪರಿಗಣಿಸಿದ ಪಟ್ಟಣ ಪಂಚಾಯಿತಿ ಅಂತಹ ಹಲವು ಬ್ಲ್ಯಾಕ್ ಸ್ಪಾಟ್ಗಳನ್ನು ಗುರುತಿಸಿ ಅಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದೆ. ಅನಂತರ ರಸ್ತೆಬದಿಗೆ, ನದಿಗಳಿಗೆ ಕೋಳಿ ತ್ಯಾಜ್ಯ ಹಾಗೂ ಇತರೇ ತ್ಯಾಜ್ಯ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

‘ಸರ್ಕಾರ ಮಟ್ಟದಲ್ಲಿ ಅಧ್ಯಯನ ನಡೆಯಲಿ’

ನದಿಗಳು ಮಲಿನವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅದರ ತಡೆಗೆ ಸರ್ಕಾರ ಮಟ್ಟದಲ್ಲಿ ಅಧ್ಯಯನಗಳು ನಡೆಯಬೇಕು. ಜಲಮೂಲಗಳನ್ನು ಉಳಿಸುವ ಕಾರ್ಯ ನಡೆಯಬೇಕು ಎಂದು ಪರಿಸರ ಚಿಂತಕ ಪ್ರೇಮಾನಂದ ಕಲ್ಮಾಡಿ ಆಗ್ರಹಿಸಿದರು. ಕೈಗಾರಿಕಾ ತ್ಯಾಜ್ಯಗಳು ಸೇರುವುದರಿಂದಲೂ ನದಿಗಳು ಕಲುಷಿತವಾಗುತ್ತಿವೆ. ರೈತರು ಕೃಷಿಗೆ ಅತಿಯಾದ ಕೀಟನಾಶಕಗಳನ್ನು ಬಳಸುವುದೂ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದೆ. ನಮ್ಮಲ್ಲಿ ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಸನಬದ್ಧವಾದ ಕೆಲಸಗಳು ನಡೆಯಬೇಕಿದೆ’ ಎಂದರು. ‘ಉಡುಪಿಯ ಇಂದ್ರಾಣಿ ನದಿಯು ಕೊಳಚೆ ನೀರು ಸೇರುವುದರಿಂದ ಸಂಪೂರ್ಣವಾಗಿ ಕಲುಷಿತಗೊಂಡಿದೆ. ನದಿ ಮಲಿನವಾಗುವುದನ್ನು ತಡೆಯಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕು’ ಎಂದರು.

ಪೊನ್ನೆಗುಂಡಿ ತೋಡಿನಲ್ಲಿ ಕಸದ ರಾಶಿ

ಕಾರ್ಕಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕಾಬೆಟ್ಟು ವೇಣುಗೋಪಾಲ ದೇವಸ್ಥಾನದ ಎದುರಿನಿಂದ ಮಂಜುನಾಥ ಪೈ ಕಾಲೇಜಿಗೆ ಸಾಗುವಾಗ ರಸ್ತೆಗೆ ಅಡ್ಡವಾಗಿ ಬರುವ ಕಿರು ತೋಡಿನಲ್ಲಿ ಕಸದ ರಾಶಿ ತುಂಬಿ ದುರ್ವಾಸನೆ ಹಬ್ಬುತ್ತಿದೆ. ಈ ತೋಡು ಆನೆಕೆರೆಯ ಕಡೆಯಿಂದ ಹೆಚ್ಚಾದ ನೀರನ್ನು ಹೊತ್ತು ತ್ಯಾಜ್ಯಗಳೊಂದಿಗೆ ಹರಿದು ಬರುತ್ತದೆ. ನೀರು ಮುಂದೆ ನಕ್ರೆ ಎಂಬಲ್ಲಿಂದ ಪಳ್ಳಿ ಗ್ರಾಮದ ಪಾಪನಾಶಿನಿ ನದಿಗೆ ಸೇರುತ್ತದೆ. ಅಲ್ಲಿಂದ ಆ ನದಿ ಸೂಡದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಈ ಕಲುಷಿತ ನೀರು ನದಿಗೆ ಸೇರುವುದರಿಂದ ನದಿಯ ನೀರನ್ನು ನಂಬಿದ ಜನರಿಗೆ ರೋಗರುಜಿನ ಹಬ್ಬುತ್ತಿದೆ. ರಸ್ತೆಯಲ್ಲಿ ಸಾಗುವವರು ಪ್ಲಾಸ್ಟಿಕ್ ಬಾಟಲ್, ಕಸ, ಹಳೆ ವಸ್ತ್ರ, ಮನೆಯ ತ್ಯಾಜ್ಯಗಳನ್ನು ಈ ತೋಡಿಗೆ ಎಸೆದು ಸಾಗುತ್ತಾರೆ. ಅಂತಹವರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

‘ಹೊಳೆಯಲ್ಲಿ ತ್ಯಾಜ್ಯದ ರಾಶಿ’

ಶಿರ್ವ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಸಮೀಪ ತ್ಯಾಜ್ಯ ಎಸೆಯಲಾಗುತ್ತಿದ್ದು, ತ್ಯಾಜ್ಯದ ಬೃಹತ್ ರಾಶಿ ನಿರ್ಮಾಣಗೊಂಡಿದೆ. ಉದ್ಯಾವರ ಸೇತುವೆ ಕೆಳಗಡೆ ಹೊಳೆಯ ನೀರಿಗೆ ಬೇರೆ ಬೇರೆ ಕಡೆಗಳಿಂದ ತ್ಯಾಜ್ಯ ತಂದು ಸುರಿಯತ್ತಿರುವುದರಿಂದ ನೀರು ಕಲುಶಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ಘನ ತ್ಯಾಜ್ಯ ಸೇರಿದಂತೆ ಪ್ರಾಣಿಜನ್ಯ ತ್ಯಾಜ್ಯಗಳನ್ನು ಕೂಡ ಸುರಿಯಲಾಗುತ್ತಿದ್ದು, ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪೂರಕ ಮಾಹಿತಿ: ಹಮೀದ್ ಪಡುಬಿದ್ರಿ, ವಿಶ್ವನಾಥ ಆಚಾರ್ಯ, ವಾಸುದೇವ ಭಟ್, ಪ್ರಕಾಶ್ ಸುವರ್ಣ ಕಟಪಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.