ಗುರುವಾರ , ಆಗಸ್ಟ್ 18, 2022
25 °C

ಹಣಕ್ಕಾಗಿ ಪೋಷಕರ ಬಳಿ ಅಪಹರಣ ನಾಟಕ: ಯುವಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪೋಷಕರ ಬಳಿ ಅಪಹರಣವಾಗಿರುವ ನಾಟಕ ಮಾಡಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಗೋವಾದ ಕ್ಯಾಸಿನೊವೊಂದರಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

25 ವರ್ಷದ ವರುಣ್ ನಾಯಕ್ ಬಂಧಿತ ಯುವಕ.

ಪ್ರಕರಣದ ವಿವರ:

ಬ್ಯಾಂಕ್‌ನ ನಿವೃತ್ತ ಎಜಿಎಂ ಪುತ್ರನಾಗಿರುವ ವರುಣ್ ನಾಯಕ್ ಜೂನ್ 26ರಂದು ಮಧ್ಯರಾತ್ರಿ ಪೋಷಕರಿಗೆ ಕರೆ ಮಾಡಿ ‘ನನ್ನನ್ನು ಕೆಲವರು ಅಪಹರಿಸಿದ್ದು, ₹5 ಲಕ್ಷ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಸುತ್ತಿದ್ದಾರೆ. ಕೂಡಲೇ ನನ್ನ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಒತ್ತಾಯಿಸಿದ್ದ’.

ಪೋಷಕರು ಉಡುಪಿ ಠಾಣೆಯಲ್ಲಿ ಪುತ್ರನ ಅಪಹರಣವಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ವರುಣ್ ನಾಯಕ್‌ ಮೊಬೈಲ್ ಕರೆಗಳ ಆಧಾರದ ಮೇಲೆ ಪರಿಶೀಲಿಸಿದ ಪೊಲೀಸರಿಗೆ ಗೋವಾದ ಕ್ಯಾಸಿನೊದಲ್ಲಿ ಲೊಕೇಷನ್ ಪತ್ತೆಯಾಯಿತು.

ಕೂಡಲೇ ಗೋವಾಗೆ ತೆರಳಿದ ಉಡುಪಿ ಪೊಲೀಸರ ತಂಡ ಗೋವಾ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದಾಗ ವರುಣ್ ನಾಯಕ್‌ ಸ್ನೇಹಿತರ ಜತೆ ಮೋಜು ಮಸ್ತಿಯಲ್ಲಿ ತೊಡಗಿರುವುದು ಬಯಲಾಯಿತು ಎಂದು ಪೊಲೀಸರು ಪ್ರಕರಣದ ವಿವರ ನೀಡಿದರು.

ಮೋಜಿಗಾಗಿ ಹಣದ ಅವಶ್ಯಕತೆ ಇದ್ದ ಕಾರಣ ಅಪಹರಣ ನಾಟಕವಾಡಿ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ವರುಣ್ ನಾಯಕ್ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಬ್ಬನೇ ಮಗನಾಗಿದ್ದರಿಂದ ಪೋಷಕರು ವರುಣ್ ನಾಯಕ್‌ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ಪ್ರೀತಿಯನ್ನೇ ಪುತ್ರ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು