ಉದ್ಯಾವರ ಮಾಧವ ಆಚಾರ್ಯ

ಉಡುಪಿ: ಹಿರಿಯ ಸಾಹಿತಿ, ರಂಗ ಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ (79) ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ಉಡುಪಿಯ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈಚೆಗೆ ಕೋವಿಡ್ಗೆ ತುತ್ತಾಗಿ ಗುಣಮುಖರಾಗಿದ್ದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
ಉದ್ಯಾವರ ಮಾಧವ ಆಚಾರ್ಯರು ಮಾರ್ಚ್ 25, 1941ರಲ್ಲಿ ಬ್ರಹ್ಮಾವರದ ಉಪ್ಪೂರಿನಲ್ಲಿ ಜನಿಸಿದರು. ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದು ಕಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕ
ರಾಗಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
‘ಬಾಗಿದ ಮರ’, ‘ಹಾಡಿ’, ‘ಭಾಗದೊಡ್ಡಮ್ಮನ ಕಥೆ’, ‘ಸೀಳುಬಿದಿರಿನ ಸಿಳ್ಳು’ ಪ್ರಮುಖ ಕಥಾ ಸಂಕಲನಗಳು. ಅವರ ‘ಶಬರಿ’ ನೃತ್ಯ ರೂಪಕ ಜನಪ್ರಿಯವಾಗಿತ್ತು. ‘ಸಮೂಹ’ ಹೆಸರಿನ ನೃತ್ಯ ರೂಪಕ ಸಂಸ್ಥೆ ಕಟ್ಟಿ ನೂರಾರು ಕಲಾವಿದರನ್ನು ಬೆಳೆಸಿದರು.
ಚಂದ್ರಶೇಖರ ಕೆದ್ಲಾಯ, ಗುರುರಾಜ ಮಾರ್ಪಳ್ಳಿ ಅವರಂತಹ ಸಂಗೀತ ನಿರ್ದೇಶಕರು ಇವರ ಗರಡಿಯಲ್ಲಿ ಬೆಳೆದವರು. ಪುತ್ರಿ, ಭರತನಾಟ್ಯ ಕಲಾವಿದೆ ಭ್ರಮರಿ ಶಿವಪ್ರಕಾಶ್ ತಂದೆಯ ಹಾದಿಯಲ್ಲಿ ಸಾಗಿ ನೃತ್ಯ ರೂಪಕಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.