ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಂದೇ ಮಾತರಂ’ ಹಾಡಿಗೆ ರಾಗ ಸಂಯೋಜನೆ ಸ್ಪರ್ಧೆ

Last Updated 9 ನವೆಂಬರ್ 2018, 15:38 IST
ಅಕ್ಷರ ಗಾತ್ರ

ಉಡುಪಿ: ‘ವಂದೇಮಾತರಂ’ ಹಾಡಿಗೆ ವಿಭಿನ್ನವಾಗಿ ರಾಗ ಸಂಯೋಜನೆ ಮಾಡಿ, ಆಯಾ ರಾಜ್ಯದ ಕಲೆ ಸಂಸ್ಕೃತಿ, ಪರಿಸರವನ್ನು ಬಿಂಬಿಸುವಂತೆ ಹಾಡಿಗೆ ಪೂರಕವಾಗಿ ಚಿತ್ರೀಕರಣ ಮಾಡಿ ಪ್ರಸ್ತುತ ಪಡಿಸಬೇಕು. ಉತ್ಕಷ್ಠ ಪ್ರಸ್ತುತಿಗೆ ₹ 2 ಲಕ್ಷ ಬಹುಮಾನ ನೀಡಲಾಗುವುದು ಎಂದು ಸಂವೇದನಾ ಫೌಂಡೇಷನ್ ಅಧ್ಯಕ್ಷ ಪ್ರಕಾಶ್ ಮಲ್ಪೆ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಅಂಗವಾಗಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ 15 ಸಾವಿರಕ್ಕೂ ಹೆಚ್ಚು ವೃತ್ತಿಪರ ಗಾಯಕ–ಗಾಯಕಿಯರು ಭಾಗವಹಿಸುವ ನಿರೀಕ್ಷೆ ಇದೆ. ಗಾಯಕರು ಕಳುಹಿಸುವ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕರು, ತಂತ್ರಜ್ಞರನ್ನೊಳಗೊಂಡ ತೀರ್ಪುಗಾರರ ತಂಡ ಪರಿಶೀಲಿಸಲಿದೆ. ಈ ತಂಡ ವಿವಿಧ ರಾಜ್ಯಗಳಿಂದ 100 ಉತ್ಕೃಷ್ಠ ಪ್ರಸ್ತುತಿಗಳನ್ನು ಆಯ್ಕೆ ಮಾಡಲಿದೆ ಎಂದರು.

ಆಯ್ಕೆಯಾದ ತಂಡಗಳು ಜನವರಿ 12ರಂದು ಮಲ್ಪೆ ಬೀಚ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಬೇರೆ ರಾಜ್ಯಗಳಿಂದ ಭಾಗವಹಿಸುವ ಗಾಯಕರು ಆಯಾ ರಾಜ್ಯದ ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಸಿದ್ಧ ಗೀತೆಗಳನ್ನು ಹಾಡಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ಪುಟ್ಟ ಭಾರತವನ್ನು ಕಣ್ತುಂಬಿಕೊಳ್ಳಬಹುದು ಎಂದರು.

ಖ್ಯಾತ ಬಾಲಿವುಡ್ ನಟರು, ಸಂಗೀತ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಂದೇಮಾತರಂ ಹಾಡಿಗೆ ಅತ್ಯುತ್ತಮ ರಾಗ, ಭಾವ, ದೃಶ್ಯಗಳನ್ನು ಪೋಣಿಸಿದ ತಂಡಕ್ಕೆ ಮೊದಲ ಬಹುಮಾನವಾಗಿ ₹ 2, ಪ್ರಶಸ್ತಿ ಫಲಕ ನೀಡಲಾಗುವುದು. ದ್ವಿತೀಯ ಬಹುಮಾನವಾಗಿ ₹ 1 ಲಕ್ಷ, ಪ್ರಶಸ್ತಿ ಫಲಕನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸ್ಪರ್ಧೆಯಲ್ಲಿ ಭಾಗವಹಿಸಲು http://samvedanafoundationudupi.org ಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನ.15ರಿಂದ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದರು. ಇದೇವೇಳೆ ಫೌಂಡೇಷನ್‌ ನೂತನ ವೆಬ್‌ಸೈಟ್‌ಗೆ ಯೋಗೇಶ್ ಬಂಗೇರ ಚಾಲನೆ ನೀಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಸುಜಿತ್ ಶೆಟ್ಟಿ, ರಾಕೇಶ್ ಕರ್ಕೆರಾ, ನಿಖಿಲ್ ಸಾಲ್ಯಾನ್‌ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT