ಶನಿವಾರ, ಜನವರಿ 28, 2023
15 °C

ಮಾಂಗೋಡುಬೆಟ್ಟು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರ್ವ: ದೇವಸ್ಥಾನಗಳು ತಾಯಂದಿರಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಿ ಬೆಳೆಯಬೇಕು. ತಾಯಂದಿರು ತಮ್ಮ ಮಕ್ಕಳಿಗೆ ದೇವರ ಬಗ್ಗೆ ಭಕ್ತಿ ಮೂಡಿಸಬೇಕು. ಆಗ ಮಗುವಿನಲ್ಲಿ ಅಹಂಕಾರದ ಬದಲಿಗೆ ಆತ್ಮವಿಶ್ವಾಸ ಮೂಡುತ್ತದೆ. ದೇವರ ಮೇಲಿನ ಭಕ್ತಿ ಮತ್ತು ಧರ್ಮದ ಮೇಲೆ ಅಭಿಮಾನ ಮೂಡುವುದರಿಂದ ಮಕ್ಕಳು ಸಂಸ್ಕಾರವಂತರಾಗಿ ಬಾಳುತ್ತಾರೆ ಎಂದು ಲೇಖಕ ಪ್ರಕಾಶ್ ಮಲ್ಪೆ ತಿಳಿಸಿದ್ದಾರೆ.

ಉದ್ಯಾವರ ಮಾಂಗೋಡುಬೆಟ್ಟು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಏಕಪವಿತ್ರ ನಾಗಮಂಡಲೋತ್ಸವ ಹಾಗೂ ಷಷ್ಠಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಪ್ರವಚನ ನೀಡಿದರು.

ಜಾತಿ, ಪಂಥ, ಪಂಗಡಗಳ ಭೇದಭಾವ ಇಲ್ಲದೆ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಉಳಿಸಿಕೊಂಡು ವಿಶ್ವಕ್ಕೆ ಮಾದರಿಯಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳು ಸಾಮರಸ್ಯ ಕೇಂದ್ರಗಳಾಗಿ ಹೊರಹೊಮ್ಮಬೇಕಾಗಿದೆ ಎಂದರು.

ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಜೈಶಂಕರ್ ಕುತ್ಪಾಡಿ, ಉದ್ಯಮಿ ಪ್ರಸಾದ್‍ರಾಜ್ ಕಾಂಚನ್, ಮಂಗಳೂರಿನ ಎಂಜಿನಿಯರ್ ರತ್ನಾಕರ ಚೌಟ, ವಾಮನ ಪಿ. ಬಂಗೇರ ಇದ್ದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಿರಿಯಣ್ಣ ಕಿದಿಯೂರು ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ರಮೇಶ್ ಕುಮಾರ್ ವಂದಿಸಿದರು. ಸಮಿತಿಯ ಕೋಶಾಧಿಕಾರಿ ಸಂತೋಷ್ ಕುಮಾರ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಕೋಗಿಲೆ ಖ್ಯಾತಿಯ ಲಿಖಿತ್ ಉಡುಪಿ ಮತ್ತು ಸಂಚಲಿ ಅವರಿಂದ ಭಕ್ತಿ ಗಾನಸುಧೆ ಹಾಗೂ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಕುತ್ಪಾಡಿ ಸದಸ್ಯರಿಂದ ‘ಚಂದ್ರಹಾಸ ಚರಿತ್ರೆ’ ಯಕ್ರಗಾನ ಪ್ರದರ್ಶನ ನಡೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.