ಶನಿವಾರ, ಅಕ್ಟೋಬರ್ 23, 2021
20 °C

ವೇದವರ್ಧನ ತೀರ್ಥರಿಗೆ ಕೃಷ್ಣ ಪೂಜಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶೀರೂರು ಮಠದ ನೂತನ ಪೀಠಾಧಿಪತಿ ವೇದವರ್ಧನ ತೀರ್ಥ ಸ್ವಾಮೀಜಿಗೆ ಶುಕ್ರವಾರ ಕೃಷ್ಣನ ಪೂಜಾಧಿಕಾರ ನೀಡಲಾಯಿತು. 

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ  ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮತ್ತು ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಅಮೃತಘಳಿಗೆಯಲ್ಲಿ ‌ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥರು ಕೃಷ್ಣ ದೇವರನ್ನು ಸ್ಪರ್ಶಿಸಿ ಪೂಜಿಸಿದರು.

ಕೃಷ್ಣಮಠದ ಸಂಪ್ರದಾಯದಂತೆ ಪ್ರಥಮ ಚಾತುರ್ಮಾಸ್ಯ ಪೂರೈಸಿದ ನಂತರ ವೇದವರ್ಧನ ತೀರ್ಥರಿಗೆ ಕೃಷ್ಣ ಪೂಜಾಧಿಕಾರ ಪ್ರಾಪ್ತವಾಗಿದೆ. ಕಳೆದ ಮೇ 14ರಂದು ಶೀರೂರು ಮಠದ 31ನೇ ಯತಿಗಳಾಗಿ ವೇದವರ್ಧನ ತೀರ್ಥರಿಗೆ ಪಟ್ಟಾಭಿಷೇಕ ಮಾಡಲಾಗಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.