ಮಂಗಳವಾರ, ಸೆಪ್ಟೆಂಬರ್ 21, 2021
26 °C
ಕೊನೆ ಕ್ಷಣದಲ್ಲಿ ಅಕ್ಷಯ್‌ ಅವರ ವರ್ಗಾವಣೆ ಆದೇಶ ಮಾರ್ಪಾಡು ಮಾಡಿದ ಸರ್ಕಾರ

ವಿಷ್ಣುವರ್ಧನ್‌ ಉಡುಪಿ ನೂತನ ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಗೆ ನೂತನ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದ ಅಕ್ಷಯ್‌ ಮಚ್ಚೀಂದ್ರ ಅವರ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ದಿಢೀರ್ ಬದಲಿಸಿದೆ. ಅವರ ಜಾಗಕ್ಕೆ ವಿಷ್ಣುವರ್ಧನ ಅವರನ್ನು ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಚಿಂಚೋಳಿ ಎಎಸ್‌ಪಿ ಆಗಿದ್ದ ಅಕ್ಷಯ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಲು ಉಡುಪಿಗೆ ಬಂದಿದ್ದರು. ಡಿವೈಎಸ್‌ಪಿಗಳು, ಸಿಪಿಐಗಳು, ಪಿಎಸ್‌ಐಗಳು ಕೇಂದ್ರ ಕಚೇರಿಗೆ ಬಂದಿದ್ದರು. ಕೊನೆ ಕ್ಷಣದಲ್ಲಿ ಸರ್ಕಾರ ವರ್ಗಾವಣೆ ಆದೇಶವನ್ನು ಮಾರ್ಪಾಡುಗೊಳಿಸಿದ್ದರಿಂದ ಅಕ್ಷಯ್ ಮಚ್ಚೀಂದ್ರ ಅವರು ಅಧಿಕಾರ ಸ್ವೀಕರಿಸದೆ ವಾಪಾಸ್‌ ಮರಳಬೇಕಾಯಿತು.

ನೂತನ ಎಸ್‌ಪಿ ವಿಷ್ಣುವರ್ಧನ ಹಿಂದೆ ಉಡುಪಿಯಲ್ಲಿಯೇ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಿರ್ಗಮಿತ ಎಸ್‌ಪಿ ನಿಶಾ ಜೇಮ್ಸ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು