ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾರ್ಪಣಂ, ಗುರುವಂದನೆ ಜುಲೈ 10, 11ರಂದು

Last Updated 6 ಜುಲೈ 2022, 16:20 IST
ಅಕ್ಷರ ಗಾತ್ರ

ಉಡುಪಿ: ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಗುರುವಂದನೆ ಹಾಗೂ ವಿಶ್ವಾರ್ಪಣಂ ಕಾರ್ಯಕ್ರಮ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಡಾ.ಜಗದೀಶ್ ಶೆಟ್ಟಿ ತಿಳಿಸಿದರು.

ಅದಮಾರು ಮಠದ ವಸತಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗುರುವಂದನೆ ಅದಮಾರು ಮಠದ ಜುಲೈ 10ರಂದು ಸಂಜೆ 4ಗಂಟೆಗೆ ವಿಶ್ವಾರ್ಪಣಂ ಹಾಗೂ 12ರಂದು ಸಂಜೆ 4.30ಕ್ಕೆ ಗುರುವಂದನೆ ನಡೆಯಲಿದೆ.

ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ಆಚಾರ್ಯ ಕರ್ನೂಲು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕೃಷ್ಣ ಪ್ರಿಯ ವಿಶ್ವ ಪ್ರಿಯ ಪುಸ್ತಕ ಹಾಗೂ ಅದಮಾರು ಮಠದ ಪರ್ಯಾಯ ಸಂಚಿಕೆ ಬಿಡುಗಡೆಯಾಗಲಿದೆ. ಪೆರವೋಡಿ ನಾರಾಯಣ ಭಟ್ ಅವರಿಗೆ ಶ್ರೀನರಹರಿತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಬ್ರಹ್ಮ ಕಪಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರ ನೀಡಿದರು.

ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡಿ.ಎ.ಜೋಸೆಫ್ ಅವರಿಂದ ವ್ಯಕ್ತಿತ್ವ ವಿಕಸನ ಕಾ‌ರ್ಯಾಗಾರ, ಸಂವಾದ ನಡೆಯಲಿದ್ದು, ಬಳಿಕ ಯಕ್ಷಗಾನ ಕೇಂದ್ರಿಂದ ಜಟಾಯು ಮೋಕ್ಷ ಯಕ್ಷಗಾನ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಸಂಚಾಲಕ ರಾಘವೇಂದ್ರ ರಾವ್, ಓಂಪ್ರಕಾಶ್ ಭಟ್‌, ಗೋವಿಂದರಾಜ್, ಪುರುಷೋತ್ತಮ ಅಡ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT