ಉಡುಪಿ: ನಿರ್ವಹಣೆ ಕೊರತೆಯಿಂದ ನಲುಗುತ್ತಿರುವ ನಗರದ ಅತಿದೊಡ್ಡ ಕೆರೆಯಾದ ಮಣಿಪಾಲದ ಮಣ್ಣಪಳ್ಳ ಕೆರೆಯಲ್ಲಿ ಈ ಬಾರಿ ಬೇಸಿಗೆ ಆರಂಭದಲ್ಲೇ ನೀರಿನ ಮಟ್ಟವು ತೀರಾ ಕುಸಿದಿದೆ.

ಮಳೆನೀರನ್ನು ಆಶ್ರಯಿಸಿರುವ ಈ ಕೆರೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಸಾಮಾನ್ಯವಾದರೂ ಈ ಬಾರಿ ಮಾರ್ಚ್ ಆರಂಭದಲ್ಲೇ ನೀರಿನ ಮಟ್ಟ ಇಳಿಕೆಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿರುವ ಸುಮಾರು 60 ಎಕ್ರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಈ ಕೆರೆಯನ್ನು ನಗರಸಭೆಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯೂ ಈ ಹಿಂದೆ ಕೇಳಿ ಬಂದಿತ್ತು.

ಪ್ರವಾಸೋದ್ಯಮ ಚಟುವಟಿಕೆಗೂ ಪೂರಕವಾಗಿರುವ ಈ ಕೆರೆಯಲ್ಲಿ ಹಿಂದೆ ಬೋಟಿಂಗ್ ವ್ಯವಸ್ಥೆಯೂ ಇತ್ತು. ಆಗ ಪ್ರವಾಸಿಗರು, ಸ್ಥಳೀಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಕೆಲ ವರ್ಷಗಳಿಂದ ಬೋಟಿಂಗ್ ವ್ಯವಸ್ಥೆ ಸ್ಥಗಿತವಾಗಿದ್ದು, ಅನಂತರ ಕೆರೆಯ ಪರಿಸರಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ವಿಶಾಲವಾಗಿರುವ ಈ ಕೆರೆಯಲ್ಲಿ ಕಾಲ ಕಾಲಕ್ಕೆ ಹೂಳೆತ್ತದೆ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಕೆರೆಗೆ ಮಳೆಗಾಲದಲ್ಲಿ ಅಪಾರ್ಟ್ಮೆಂಟ್ಗಳ ಕಲುಷಿತ ನೀರೂ ಸೇರುತ್ತಿದೆ ಎಂದು ಆರೋಪಿಸುತ್ತಾರೆ.

ಮಣ್ಣಪಳ್ಳ ಕೆರೆಯ ಸುತ್ತಲೂ ನಡಿಗೆ ಪಥವಿದ್ದರೂ ಅದರಲ್ಲಿ ಬೀದಿನಾಯಿಗಳು ಸದಾ ಮಲಗಿರುತ್ತವೆ. ನಡಿಗೆ ಪಥದ ಇಂಟರ್ಲಾಕ್ ಅಲ್ಲಲ್ಲಿ ಕಿತ್ತು ಹೋಗಿದೆ. ಚಿಟ್ಟೆ ಉದ್ಯಾನವಿದ್ದರೂ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಕೆರೆಯ ಪರಿಸರದಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲ. ಎಲ್ಲೆಂದರಲ್ಲಿ ತರಗೆಲೆ ರಾಶಿ ಬಿದ್ದಿದೆ. ಕೆರೆಯ ಸುತ್ತಲೂ ಕುರುಚಲು ಕಾಡು ಬೆಳೆದಿರುವುದರಿಂದ ಕೆರೆಯ ದಂಡೆಯ ಸೌಂದರ್ಯ ಮರೆಯಾಗಿದೆ. ಕೆರೆಯಿಂದ ನೀರು ಹರಿದು ಹೋಗುವ ಕಾಲುವೆಗಳಲ್ಲಿ ಕಸ ತುಂಬಿಕೊಂಡಿದೆ. ಪ್ಲಾಸ್ಟಿಕ್, ಕಸವನ್ನೂ ಕೆರೆಗೆ ಎಸೆಯಲಾಗಿದೆ.

ಮಣ್ಣಪಳ್ಳ ಕೆರೆಯ ಅಂಚಿನಲ್ಲಿ ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್, ಓಪನ್ ಬಿಲ್ ಸ್ಟಾರ್ಕ್, ಬ್ಲ್ಯಾಕ್ ಹೆಡೆಡ್ ಐಬಿಸ್ ಮೊದಲಾದ ಪಕ್ಷಿ ಪ್ರಬೇಧಗಳನ್ನು ಈಗಲೂ ಕಾಣಬಹುದು. ಕೆರೆಯ ನಡುವೆ ಇರುವ ನಡುಗಡ್ಡೆಗಳ ಸುತ್ತಲೂ ನೀರು ಆರಿಹೋಗಿರುವುದರಿಂದ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಮಣ್ಣಪಳ್ಳ ಕೆರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ. ಇದರಿಂದ ಕೆರೆಯ ವೈಭವ ಮತ್ತೆ ಮರಳಬಹುದು ಎನ್ನುತ್ತಾರೆ ಅವರು.

‘₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ’

ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ₹2 ಕೋಟಿಯಲ್ಲಿ ಹಾಗೂ ಕೆರೆ ದಂಡೆಯ ಪಾರ್ಕ್ ಅನ್ನು ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆರೆಯಲ್ಲಿ ಬೇಸಿಗೆ ಕಾಲದಲ್ಲಿ ನೀರು ಖಾಲಿಯಾಗುತ್ತಿರುವುದರಿಂದ ಬೋಟಿಂಗ್ ವ್ಯವಸ್ಥೆ ಮರು ಆರಂಭಕ್ಕೆ ಚಿಂತನೆ ನಡೆಸಿಲ್ಲ. ಪಾರ್ಕ್ನಲ್ಲಿ ನಡಿಗೆ ಪಥ ವಿಸ್ತರಣೆ ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ತಿಳಿಸಿದರು.

‘ಅಭಿವೃದ್ಧಿ ಕಾಣದ ಕೆರೆ’

ಮಣ್ಣಪಳ್ಳ ಕೆರೆ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ವ್ಯಯವಾದರೂ ಅಲ್ಲಿ ಅಭಿವೃದ್ಧಿ ಕಾಣುವುದಿಲ್ಲ. ಕೆರೆಯ ಸುತ್ತಲೂ ಕಾಡು ಬೆಳೆದಿದೆ. ಸಂಬಂಧಪಟ್ಟವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೆರೆಯ ಸುತ್ತಲೂ ನಡಿಗೆಗಾಗಿ ಪ್ರತಿದಿನ ಬಹಳಷ್ಟು ಜನರ ಬರುತ್ತಾರೆ. ಅವರಿಗೆ ಅನುಕೂಲವಾಗಲು ನಡಿಗೆ ಪಥದ ಕಿತ್ತುಹೋದ ಇಂಟರ್ಲಾಕ್ಗಳನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.