ಕಾರ್ಯಕರ್ತರನ್ನು ಕಡೆಗಣಿಸಿಲ್ಲ : ಜಯಮಾಲ

7

ಕಾರ್ಯಕರ್ತರನ್ನು ಕಡೆಗಣಿಸಿಲ್ಲ : ಜಯಮಾಲ

Published:
Updated:
Deccan Herald

ಉಡುಪಿ: ‘ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಕಡೆಗಣಿಸುವಂತಹ ಕೆಲಸ ಮಾಡಿಲ್ಲ. ನನಗೆ ನೀಡಿದ ಜವ್ದಾರಿಯನ್ನು ಪ್ರಮಾಣಿಕವಾಗಿ ನೆರವೇರಿಸಿಕೊಂಡು ಹೋಗಿದ್ದೇನೆ. ನಿಮ್ಮ ನ್ಯಾಯಸಮ್ಮತ ಹಿತಾಸಕ್ತಿಗಾಗಿ ಸದಾ ಬೆಂಬಲ ನೀಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ತಿಳಿಸಿದರು.

ಮಂಗಳವಾರ ನಗರದಲ್ಲಿ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು. ಭಾರತ್ ಬಂದ್ ಸಮಯದಲ್ಲಿ ಪಕ್ಷದ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸಿದ ಘಟನೆ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾ ಮುಖಂಡರಿಂದ ಪಡೆದುಕೊಂಡಿದ್ದೇನೆ.  ಕಾನೂನಿನ ನೆಲೆಯಲ್ಲಿ ನೆರವಿಗೆ ಕ್ರಮ ಕೈಗೊಂಡಿದ್ದೇನೆ. ಈ ವಿಚಾರದಲ್ಲಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗ ಬೇಕಾಗಿಲ್ಲ. ಪಕ್ಷ ನಿಷ್ಠೆಯನ್ನು ಯಾರು ಪ್ರಶ್ನೆ ಮಾಡುವಂತಗಾಬಾರದು ಅನ್ನುವಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಕರ್ತರು ನಿಷ್ಠೆ ಯಿಂದ ಕೆಲಸ ಮಾಡಬೇಕು, ಪಕ್ಷದ ಆತಂರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸುಂತಾಗಬೇಕು, ಬಹಿರಂಗ ಚರ್ಚೆ ಮಾಡುವುದು ಸೂಕ್ತವಲ್ಲ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಉಪಸ್ಥಿತರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !