ಬ್ರಹ್ಮಾವರ: ಯಕ್ಷಗಾನ ಕ್ಷೇತ್ರವು ವಿಶಾಲ ವ್ಯಾಪ್ತಿಯನ್ನು ಹೊಂದಿದೆಯಾದರೂ ರಂಗ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವ ಪರಿವರ್ತನೆಗಳು ಮೂಲ ಯಕ್ಷಗಾನಕ್ಕಿಂತ ಭಿನ್ನವಾಗಿವೆ. ಸತ್ವಭರಿತವಾದ ಪೌರಾಣಿಕ ಕಥಾನಕಗಳಲ್ಲಿ ಇಂತಹ ಆಭಾಸಗಳು ಇರಲಿಲ್ಲ. ಇಂದು ಪ್ರದರ್ಶನಗೊಳ್ಳುವ ಕೆಲ ಕಾಲ್ಪನಿಕ ಕಥಾನಕಗಳಲ್ಲಿ ಯಕ್ಷಗಾನೀಯ ವಾತಾವರಣ ಕಡಿಮೆಯಾಗುತ್ತಿದೆ. ಹಾಗಾಗಿ ಯಕ್ಷಗಾನ ಕಲೆಯ ಸ್ವರೂಪವನ್ನು ಉಳಿಸುವಲ್ಲಿ ಸಂಘಟಿತ ಪ್ರಯತ್ನ ಆಗಬೇಕಿದೆ ಎಂದು ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು.

ಸಾಲಿಗ್ರಾಮ ಗುಂಡ್ಮಿಯ ಐರೋಡಿ ಸದಾನಂದ ಹೆಬ್ಬಾರ್ ರಂಗಮಂಟಪದಲ್ಲಿ ಹೆಬ್ರಿ-ಚಾರ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ‘ನೆನಪಿನಂಗಳದಲ್ಲಿ ಕಾಳಿಂಗ ನಾವುಡ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪ್ಪಿನಂಗಡಿ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ‘ಯಕ್ಷಗಾನವೆಂಬ ಬಾನಂಗಳದಲ್ಲಿ ಸೂರ್ಯನಂತೆ ಬೆಳಗಿ ತನ್ನ ಅದ್ಭುತ ಕಂಠಸಿರಿಯ ಮೂಲಕ ಯಕ್ಷಗಾನ ಕಲಾವಿದರನ್ನು ರಂಗದಲ್ಲಿ ಬಳಸಿ, ಬೆಳೆಸಿ ಕಲೆಯ ವಿಸ್ತಾರವನ್ನು ಮಾಡಿದ ಕೀರ್ತಿ ಭಾಗವತ ಕಾಳಿಂಗ ನಾವುಡರಿಗೆ ಸಲ್ಲುತ್ತದೆ. ಅಲ್ಪಾವಧಿಯಲ್ಲಿ ಪ್ರಸಂಗ ರಚನೆ, ರಂಗ ನಿರ್ದೇಶನ ಮತ್ತು ಜನಪ್ರಿಯತೆಯಲ್ಲಿ ಅವರು ಅನನ್ಯ ಸಾಧನೆ ಮಾಡಿದ ವಿಶಿಷ್ಟ ಕಲಾವಿದ’ ಎಂದು ಸ್ಮರಿಸಿದರು.

ಲೇಖಕ ಜಿ. ಹರಿಕೃಷ್ಣ ಹೊಳ್ಳ ಬ್ರಹ್ಮಾವರ ಮಾತನಾಡಿ, ‘ಧಾರೇಶ್ವರರು ಪ್ರಸಂಗಗಳ ನಿರ್ವಹಣೆಯಲ್ಲಿ ಪ್ರಬುದ್ಧತೆ ಸಾಧಿಸಿದ್ದರಲ್ಲದೇ ಧ್ವನಿವರ್ಧಕದ ಬಳಕೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ ಪರಿಣಾಮ ಅವರ ಭಾಗವತಿಕೆ ಸೊಗಸಾಗಿತ್ತು. ಬಡಗುತಿಟ್ಟಿನ ಭಾಗವತಿಕೆಯಲ್ಲಿ ಅವರು ತಮ್ಮದೇ ಆದ ಶೈಲಿಯ ಪ್ರವರ್ತಕರಾಗಿದ್ದಾರೆ" ಎಂದರು.

ಪ್ರಸಂಗಕರ್ತ ಶಿವಕುಮಾರ್ ಅಳಗೋಡು ಅಭಿನಂದನಾ ನುಡಿಗಳನ್ನಾಡಿದರು. ಕವಿ ಚಾರ ಪ್ರದೀಪ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವದಾಸ ರಾವ್ ಕೂಡ್ಲಿ, ‘ಇಂದಿನ ಭಾಗವತರು ಪ್ರಸಿದ್ಧ ಭಾಗವತರ ಅನುಕರಣೆ ಮಾಡದೆ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಇಂದು ಕಲಾವಿದರಿಗಿರುವ ಸೌಲಭ್ಯ, ಅವಕಾಶ ಮತ್ತು ತಂತ್ರಜ್ಞಾನದ ಕೊಡುಗೆ ಹಿಂದಿನ ಕಲಾವಿದರಿಗಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದರು.

ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮಾತನಾಡಿದರು. ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ಎ.ರಾಜಶೇಖರ್ ಹೆಬ್ಬಾರ್, ಶಿಕ್ಷಕ-ಕಲಾವಿದ ನಾಗರಾಜ್ ಆಚಾರ್ಯ ವಡ್ಡರ್ಸೆ, ವಿನುತ ಆಚಾರ್, ಉಮೇಶ್ ಆಚಾರ್ಯ ಸಾಲಿಗ್ರಾಮ, ಶಿಕ್ಷಕಿ ಸವಿತಾ, ಮತ್ತು ಉಪನ್ಯಾಸಕಿ ಭಾರತಿ ಯು.ಎಲ್.ಗೇರುಕಟ್ಟೆ ಉಪಸ್ಥಿತರಿದ್ದರು.

ಚಾರ ಪ್ರದೀಪ ಹೆಬ್ಬಾರ್ ಸ್ವಾಗತಿಸಿ ದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ ದರು. ರವಿರಾಜ್ ಬೈಕಾಡಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಚಾರ ಪ್ರದೀಪ ಹೆಬ್ಬಾರ್ ವಿರಚಿತ ‘ಉಲೂಪಿ ಕಲ್ಯಾಣ’ ಪ್ರಸಂಗದ ತಾಳಮದ್ದಳೆ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-28-1373237954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.