ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹೆಯಲ್ಲಿ ಯಕ್ಷಗಾನ ಉನ್ನತ ಕೋರ್ಸ್‌

ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್‌.ಬಲ್ಲಾಳ್
Last Updated 6 ಮಾರ್ಚ್ 2021, 16:25 IST
ಅಕ್ಷರ ಗಾತ್ರ

ಉಡುಪಿ: ಯಕ್ಷಗಾನಕ್ಕೆ ಸಂಬಂಧಿಸಿದ ಉನ್ನತ ಕೋರ್ಸ್‌ಗಳನ್ನು ಮಾಹೆ ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ಸಿದ್ಧರಿರುವುದಾಗಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್‌.ಬಲ್ಲಾಳ್ ಹೇಳಿದರು.

ಮಣಿಪಾಲದ ಮಾಹೆ, ಯಕ್ಷಗಾನ ಕೇಂದ್ರದಿಂದ ಶನಿವಾರ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ದೇಶದ ಉದ್ದಗಲಕ್ಕೂ ಪಸರಿಸಬೇಕಾದರೆ ಇಂತಹ ತರಬೇತಿ ಶಿಬಿರಗಳ ಆಯೋಜನೆ ಮುಖ್ಯ. ರಾಜ್ಯ ಮಾತ್ರವಲ್ಲ, ಹೊರ ರಾಜ್ಯಗಳಿಂದ ಕಲಾಸಕ್ತರು ಶಿಬಿರಕ್ಕೆ ಬಂದು ಯಕ್ಷಗಾನದ ಹೆಜ್ಜೆಗಳನ್ನು ಕಲಿತಿದ್ದು ಹೆಮ್ಮೆಯ ವಿಚಾರ ಎಂದರು.

ಮಹಾರಾಷ್ಟ್ರ, ರಾಜಸ್ತಾನ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳ 16 ಮಂದಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದು, 20 ದಿನಗಳ ಅವಧಿಯಲ್ಲಿ ಯಕ್ಷಗಾನದ ಹೆಜ್ಜೆ, ಆಟ, ನಾಟಕ ಹಾಗೂ ನಟನೆಯ ತರಬೇತಿ ಪಡೆದಿದ್ದಾರೆ. ಜತೆಗೆ ಶಿಬಿರಾರ್ಥಿಗಳಿಗೆ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿಸಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿಬಿರಾರ್ಥಿಗಳಿಂದ ಪ್ರದರ್ಶನ ನಡೆಯಿತು.


ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಉಡುಪಿ ಅಧ್ಯಕ್ಷ ತಲ್ಲೂರು ತಲ್ಲೂರು ಶಿವರಾಮಶಟ್ಟಿ, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ಮಾಹೆ ರಿಜಿಸ್ಟ್ರಾರ್‌ ಡಾ.ನಾರಾಯಣ ಸಭಾಯಿತ್, ಮಾಜಿ ರಿಜಿಸ್ಟ್ರಾರ್ ಪಿಎಲ್‌ಎನ್‌ಜಿ ರಾವ್‌, ಭುವನಪ್ರಸಾದ್ ಹೆಗಡೆ ಇದ್ದರು. ಡಾ.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಗೋವಿಂದಪೈ ಸಂಶೋಧನಾ ಕೇಂದ್ರದ ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT