ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಬಡ್ಡಿ: ವಿದ್ಯಾಪ್ರಭೋದಿನಿ, ಸಾಗರ್ ವಿದ್ಯಾಮಂದಿರ ಪ್ರಥಮ 

Published 4 ಆಗಸ್ಟ್ 2024, 13:45 IST
Last Updated 4 ಆಗಸ್ಟ್ 2024, 13:45 IST
ಅಕ್ಷರ ಗಾತ್ರ

ಪಡುಬಿದ್ರಿ: ತೆಂಕ ಎರ್ಮಾಳಿನಲ್ಲಿ ಶನಿವಾರ ನಡೆದ ಪಡುಬಿದ್ರಿ ವೃತ್ತಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಬಾಲಕರ ವಿಭಾಗದಲ್ಲಿ ವಿದ್ಯಾಪ್ರಭೋದಿನಿ ಎರ್ಮಾಳು ಬಡಾ, ಬಾಲಕಿಯರ ವಿಭಾಗದಲ್ಲಿ ಪಡುಬಿದ್ರಿಯ ಸಾಗರ್ ವಿದ್ಯಾಮಮಂದಿರ ಪ್ರಥಮ ಸ್ಥಾನ ಪಡೆದುಕೊಂಡವು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎರ್ಮಾಳು ತೆಂಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಪಡುಬಿದ್ರಿ ವೃತ್ತದ 16 ಶಾಲೆಯ ತಂಡಗಳು ಭಾಗವಹಿಸಿದ್ದವು.

ಬಾಲಕರ ವಿಭಾಗದಲ್ಲಿ ಪಡುಬಿದ್ರಿ ಸಾಗರ್ ವಿದ್ಯಾಮಂದಿರ, ಬಾಲಕಿಯರ ವಿಭಾಗದಲ್ಲಿ ಲಯನ್ಸ್ ಕ್ಲಬ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. 

ಟೂರ್ನಿಗೆ ಚಾಲನೆ ನೀಡಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಸೌಲಭ್ಯ–ಸವಲತ್ತುಗಳಿದ್ದು, ಅವನ್ನು ಬಳಸಿ ವಿದ್ಯಾರ್ಜನೆ ಮಾಡಿ ಉತ್ತಮ ಪ್ರಜೆಗಳಾಗಬೇಕು. ಶಿಸ್ತಿನೊಂದಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಎಂದರು.

ದೈಹಿಕ ಶಿಕ್ಷಣ ತಾಲ್ಲೂಕು ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸೆಪ್ಟೆಂಬರ್‌ ಒಳಗೆ ಶಾಲಾ ಕ್ರೀಡಾಕೂಟಗಳು ಮುಕ್ತಾಯಗೊಳ್ಳಬೇಕಿದೆ. ಕಾಪು ತಾಲ್ಲೂಕಿನ 4 ವಲಯದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು, 8ರಂದು ತಾಲ್ಲೂಕು ಮಟ್ಟದ ಕಬಡ್ಡಿ ಟೂರ್ನಿ ಮೂಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಎರ್ಮಾಳು ತೆಂಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಶುಭ ಹಾರೈಸಿದರು. ತೆಂಕ ಗ್ರಾ.ಪಂ. ಅಧ್ಯಕ್ಷೆ ಸುರೇಖಾ, ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಯ್ಯ ಇದ್ದರು. ಮುಖ್ಯಶಿಕ್ಷಕಿ ವಿನೋದ ಸ್ವಾಗತಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT