ಮಲ್ಪೆ ಬೀಚ್‌ನಲ್ಲಿ ಚನ್ನಪಟ್ಟಣದ ಯುವಕ ಸಾವು

ಗುರುವಾರ , ಜೂಲೈ 18, 2019
22 °C

ಮಲ್ಪೆ ಬೀಚ್‌ನಲ್ಲಿ ಚನ್ನಪಟ್ಟಣದ ಯುವಕ ಸಾವು

Published:
Updated:

ಉಡುಪಿ: ಗೆಳೆಯರೊಟ್ಟಿಗೆ ಮಲ್ಪೆ ಬೀಚ್‌ಗೆ ಈಜಾಲು ಇಳಿದಿದ್ದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಚನ್ನಪಟ್ಟಣದ ದೀಪಕ್‌ (19) ಮೃತ ಯುವಕ. ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.

ವಿವರ: ದೀಪಕ್ ತನ್ನ 13 ಜನ ಸ್ನೇಹಿತರ ಜತೆ ವಾರಾಂತ್ಯದ ರಜೆ ಕಳೆಯಲು ಪ್ರವಾಸಕ್ಕೆ ಬಂದಿದ್ದ. ಮಡಿಕೇರಿಯಿಂದ ಮಲ್ಪೆ ಬೀಚ್‌ಗೆ ಬಂದಿದ್ದ ತಂಡ ಸಮುದ್ರಕ್ಕೆ ಇಳಿಯಲು ಯತ್ನಿಸಿದಾಗ ಅಲ್ಲಿದ್ದ ಸಿಬ್ಬಂದಿ ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ್ದರು.

ಆದರೂ, ಎಚ್ಚರಿಕೆಯನ್ನು ಕಡೆಗಣಿಸಿದ ಯುವಕರ ತಂಡ ಸಿಬ್ಬಂದಿಯ ಕಣ್ತಪ್ಪಿಸಿ ಸಮುದ್ರದ ಬೇರೊಂದು ಭಾಗದಲ್ಲಿ ಈಜಾಡಲು ಇಳಿದಿತ್ತು. ಈ ಸಂದರ್ಭ ಕಡಲು ಪ್ರಕ್ಷುಬ್ಧಗೊಂಡಿದ್ದರಿಂದ ನೀರಿನ ಸೆಳೆತಕ್ಕೆ ಸಿಕ್ಕು ದೀಪಕ್‌ ಮುಳುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಕ್‌ ಬೆಂಗಳೂರಿನಲ್ಲಿ ಐಟಿಐ ಮಾಡುತ್ತಿದ್ದ ಎಂಬ ವಿವರ ಲಭ್ಯವಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 5

  Sad
 • 1

  Frustrated
 • 1

  Angry

Comments:

0 comments

Write the first review for this !