ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಾಗದ ₹ 13 ಕೋಟಿ ಅನುದಾನ

14ನೇ ಹಣಕಾಸು ಯೋಜನೆ: ಹಣ ಸರ್ಕಾರಕ್ಕೆ ವಾಪಸ್ ಹೋಗದಂತೆ ಕ್ರಮ
Last Updated 13 ಸೆಪ್ಟೆಂಬರ್ 2019, 12:16 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಿಗೆ 14ನೇ ಹಣಕಾಸು ಯೋಜನೆಯಡಿಯಲ್ಲಿ ನೀಡಲಾದ ₹ 13 ಕೋಟಿಯಷ್ಟು ಅನುದಾನ ಖರ್ಚಾಗಿಲ್ಲ. ಅದುಸರ್ಕಾರಕ್ಕೆ ವಾಪಸ್ ಹೋಗುವ ಮೊದಲುಅಗತ್ಯ ಕಾಮಗಾರಿಕೈಗೊಳ್ಳಬೇಕು ಎಂದುವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ನಗರದಲ್ಲಿ ಪ್ರಕೃತಿ ವಿಕೋಪ ಹಾಗೂ ಇತರ ವಿಷಯಗಳ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಗ್ರಾಮ ಪಂಚಾಯ್ತಿಗಳು ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಖರ್ಚು ಮಾಡುವಂತೆ ಕೋರಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ಈ ಹಣಕ್ಕೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ದೊರೆತರೂ ಬಳಕೆ ಮಾಡಿಲ್ಲ.2015ರಿಂದ 2019ರವರೆಗಿನ ಹಣ ಖರ್ಚಾಗಿಲ್ಲ. ಇದೇ ರೀತಿ ವಿಳಂಬ ಮಾಡಿದರೆ ಸರ್ಕಾರಕ್ಕೆ ವಾಪಸಾಗುತ್ತದೆ’ ಎಂದರು. ಇದಕ್ಕೆಕಾಗೇರಿ ಪ್ರತಿಕ್ರಿಯಿಸಿ, ‘ಕೆಲವು ಪಂಚಾಯ್ತಿಗಳಲ್ಲಿ ಕ್ರಿಯಾಯೋಜನೆ ಮಾಡಿಲ್ಲ. ಕ್ರಿಯಾಯೋಜನೆ ಆದರೂ ಮಂಜೂರಾತಿ ಪಡೆಯದೇ ಹಣ ಹಾಗೆ ಉಳಿದಿದೆ.ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆನಿರ್ದೇಶನ ನೀಡಿ ಕೂಡಲೇ ಹಣ ಖರ್ಚು ಮಾಡಿ’ ಎಂದು ತಾಲ್ಲೂಕುಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ₹15 ಕೋಟಿಗೂ ಅಧಿಕ ಹಾನಿಯಾಗಿದೆ. ಶಿರಸಿ– ಸಿದ್ದಾಪುರ ಕ್ಷೇತ್ರಕ್ಕೆ ಕಾರ್ಯಪಡೆಗೆ ₹ 1 ಕೋಟಿ ಬಂದಿದೆ. ಇದರಲ್ಲಿ ಶಿರಸಿ ನಗರಕ್ಕೆ ₹ 20 ಲಕ್ಷ, ಗ್ರಾಮೀಣ ಪ್ರದೇಶಕ್ಕೆ ₹ 40 ಲಕ್ಷ ಹಾಗೂ ಸಿದ್ದಾಪುರ ತಾಲ್ಲೂಕಿಗೆ ₹40 ಲಕ್ಷ ಹಂಚಿಕೆ ಮಾಡಿ ಕ್ರಿಯಾಯೋಜನೆ ಮಾಡಲಾಗುವುದು. ಜಿಲ್ಲಾ ಪಂಚಾಯ್ತಿ ರಸ್ತೆ ದುರಸ್ತಿಗೆಶಿರಸಿ ತಾಲ್ಲೂಕಿಗೆ ₹ 1.22 ಕೋಟಿ ಬಿಡುಗಡೆಯಾಗಿದೆ. ₹ 74 ಲಕ್ಷ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಿದ್ದು, ಕ್ರಿಯಾಯೋಜನೆ ಮಾಡಬೇಕಿದೆ ಎಂದರು.

ಜಿಲ್ಲಾ ಪಂಚಾಯ್ತಿ ರಸ್ತೆ ಸುಧಾರಣೆಗೆ ₹7 ಕೋಟಿ ಅನುದಾನದ ಅಗತ್ಯವಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಗಾಂವಕರ್ ಸಭೆಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ71ಕಾಮಗಾರಿಗಳಿಗೆ ₹25 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಂಜಿನಿಯರ್ ಸತೀಶ ಜಹಗೀರದಾರ್ ತಿಳಿಸಿದರು.

‘ತಾತ್ಕಾಲಿಕವಾಗಿ ದುರಸ್ತಿ ಮಾಡಿ’:ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಭಾಗಶಃ ಹಾಳಾಗಿ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನು ಕೂಡಲೇ ತಾತ್ಕಾಲಿಕವಾಗಿ ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು. ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದ್ದ, ವಿಶೇಷ ಅನುದಾನಕ್ಕೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದುವಿಶ್ವೇಶ್ವರ ಹೆಗಡೆ ಕಾಗೇರಿತಿಳಿಸಿದರು.

ಈ ವೇಳೆ ತಾಲ್ಲೂಕುಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಎಂ.ಆರ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT