1,185 ಹೆಕ್ಟೇರ್ ನೆಡುತೋಪು ನಿರ್ಮಾಣ ಯೋಜನೆ

ಗುರುವಾರ , ಜೂನ್ 27, 2019
29 °C
ಕಾರವಾರ ಉಪವಿಭಾಗದ ಮೂರು ನರ್ಸರಿಗಳಲ್ಲಿ 13.74 ಲಕ್ಷ ಸಸಿಗಳು

1,185 ಹೆಕ್ಟೇರ್ ನೆಡುತೋಪು ನಿರ್ಮಾಣ ಯೋಜನೆ

Published:
Updated:
Prajavani

ಕಾರವಾರ: ಪ್ರಸಕ್ತ ಸಾಲಿನಲ್ಲಿ 1,185 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಮಾಡಲು ಅಗತ್ಯ ಇರುವ ಸುಮಾರು 13.74 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಕಾರವಾರ ಉಪವಿಭಾಗದ ಮೂರು ನರ್ಸರಿಗಳಲ್ಲಿ ಬೆಳೆಸಲಾಗಿದೆ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬರುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನ ಮಹೋತ್ಸವ ಆಚರಿಸಲೂ ಅರಣ್ಯ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅಗತ್ಯ ಇರುವ ಗಿಡಗಳನ್ನು ಕೂಡ ಈ ನರ್ಸರಿಗಳಿಂದ ಪೂರೈಸಲಾಗುತ್ತದೆ.

ಸಾಮಾಜಿಕ ಅರಣ್ಯ ವಿಭಾಗಗಳ ಸುಪರ್ದಿಯಲ್ಲಿರುವ ಹಣಕೋಣ, ಕೋವೆ ಹಾಗೂ ವಿರ್ಜೆಯ ನರ್ಸರಿಗಳಲ್ಲಿ ಅಕೇಶಿಯಾ, ಬಿದಿರು, ಬೆತ್ತ, ಕಿಂದಳ್, ಸಾಗವಾನಿ, ಹೊನ್ನೆ ಮುಂತಾದ ಗಿಡಗಳ ಜೊತೆಗೆ ಹಲಸು, ಮಾವು, ನೇರಳೆಯಂಥ ಹಣ್ಣಿನ ಸಸಿಗಳನ್ನೂ ಬೆಳೆಸಲಾಗಿದೆ. ಇದರ ಜತೆಗೆ ಬೀಜದುಂಡೆಗಳನ್ನೂ ತಯಾರಿಸಲಾಗುತ್ತಿದ್ದು, ಮಳೆ ಬೀಳುತ್ತಿದ್ದಂತೆ ಇವುಗಳ ನಾಟಿ ಕಾರ್ಯ ಶುರುವಾಗಲಿದೆ. 

‘ಇವುಗಳಲ್ಲಿ ಕೆಲವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೂ ವಿತರಿಸಲಾಗುತ್ತದೆ. ಶಾಲಾ- ಕಾಲೇಜು, ಸರ್ಕಾರಿ ಕಚೇರಿ ಆವರಣ, ರಸ್ತೆ ಬದಿ ನೆಟ್ಟು ಅಭಿವೃದ್ಧಿ ಪಡಿಸಲು ಕೂಡ ಈ ಸಸಿಗಳನ್ನು ಉಪಯೋಗಿಸಲಾಗುತ್ತದೆ’ ಎಂದು ಉಪವಿಭಾಗದ ಉಪ ಅರಣ್ಯ ಅಧಿಕಾರಿ ವಸಂತರೆಡ್ಡಿ ತಿಳಿಸಿದರು.

‘ಶಾಲಾ ಮಕ್ಕಳಿಗೆ ವಿತರಿಸಲು ಎಂಎಂಎಸ್‌ವಿ ಯೋಜನೆಯ ಅಡಿ 4,200 ಸಸಿ, ಆರ್‌ಎಸ್‌ಪಿಡಿ ಯೋಜನೆಯ ಅಡಿ ಸಾರ್ವಜನಿಕರಿಗೆ ನೀಡಲು 29,700 ಸಸಿ, ಹಸಿರು ಕರ್ನಾಟಕ ಯೋಜನೆಯ ಅಡಿ ಮನಮಹೋತ್ಸವ ಕಾರ್ಯಕ್ರಮಕ್ಕೆ ವಿತರಿಸಲು 71,500 ಸಸಿಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 4.92 ಕಿ.ಮೀ. ರಸ್ತೆ ಬದಿ ಮಾನ್ಸೂನ್ ನೆಡುತೋಪು ಹಾಗೂ 3.03 ಕಿ.ಮೀ. ನಗರ ಪ್ರದೇಶದಲ್ಲಿ ಮಾನ್ಸೂನ್ ನೆಡುತೋಪು ರಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಗಿದೆ’ ಎಂದು ಅವರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !