ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಚರಣೆ ವೇಳೆ ದಾಳಿಗೆ ಯತ್ನ: 15 ಅಡಿ ಉದ್ದ ಕಾಳಿಂಗ ಸರ್ಪ ಸೆರೆ

Last Updated 9 ಏಪ್ರಿಲ್ 2022, 16:11 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ರಾಗಿಹೊಸಳ್ಳಿ ಗ್ರಾಮದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕುಮಟಾದ ಉರಗ ರಕ್ಷಕ ಪವನ ನಾಯ್ಕ ಶುಕ್ರವಾರ ಸಂಜೆ ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟರು.

ಪರಮ ವೆಂಕು ಮರಾಠಿ ಎಂಬುವವರ ಮನೆಯೊಳಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ದೊಡ್ಡ ಗಾತ್ರದ ಹಾವು ಕಂಡು ಭಯಭೀತರಾದ ಜನರು ಪವನ್ ಅವರಿಗೆ ವಿಷಯ ತಿಳಿಸಿದ್ದರು.

ಕಾರ್ಯಾಚರಣೆ ವೇಳೆ ಮನೆಯ ಚಾವಣಿ ಮೇಲಿದ್ದ ಹಾವು ಪವನ್ ಮೇಲೆ ದಾಳಿ ನಡೆಸಲು ಯತ್ನಿಸಿದೆ. ದಾಳಿಯಿಂದ ಪವನ್ ತಪ್ಪಿಸಿಕೊಂಡಿದ್ದರೂ ಸ್ಥಳದಲ್ಲಿದ್ದವರು ಗಲಿಬಿಲಿಗೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಬೇಸಿಗೆ ದಿನದಲ್ಲಿ ಸೆಖೆಯ ಕಾರಣ ಕಾಳಿಂಗ ಸರ್ಪ ಕೋಪಗೊಂಡಿರುತ್ತವೆ. ಅವುಗಳ ಮಿಲನದ ಸಂದರ್ಭವೂ ಆಗಿರುವ ಕಾರಣ ಗಂಡು ಹಾವುಗಳು ಹೆಚ್ಚು ಉದ್ರೇಕದಲ್ಲಿರುತ್ತವೆ. ಹೀಗಾಗಿ ಅವುಗಳು ದಾಳಿ ನಡೆಸಲು ಯತ್ನಿಸುವುದು ಸಾಮಾನ್ಯ’ ಎಂದು ಪವನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT