ಬುಧವಾರ, ಸೆಪ್ಟೆಂಬರ್ 28, 2022
27 °C

ಯಲ್ಲಾಪುರ ಬಳಿ ಲಾರಿಗಳ ಮುಖಾಮುಖಿ ಡಿಕ್ಕಿ: ಒಬ್ಬ ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಹಿಟ್ಟಿನಬೈಲ್ ಬಳಿಯ ‘ಮಹಾರಾಷ್ಟ್ರ ಡಾಬಾ’ ಮುಂದೆ‌ ಗುರುವಾರ, ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವಾದ ಲಾರಿಯು ಹೆದ್ದಾರಿಗೆ ಅಡ್ಡಲಾಗಿ‌ ನಿಂತಿದ್ದರಿಂದ ಸ್ವಲ್ಪ ಕಾಲ ವಾಹನಗಳ ಸಂಚಾರದಲ್ಲಿ ವ್ಯತ್ಯಯವುಂಟಾಯಿತು.

ಮಹಾರಾಷ್ಟ್ರದ ನಂದ್ಯಾಡದ ಲೋಹಾ ತಾಲ್ಲೂಕಿನ ಹರನವಾಡದ ಪರಮೇಶ್ವರ ಲಕ್ಕಣದಖಲವಾಡ (25) ಮೃತರು. ಅದೇ ಊರಿನ ರಾಜು ಬಾಬುರಾವ್ ಎಳ್ಳೆ(24), ಮಧ್ಯಪ್ರದೇಶದ ಬೇತೂಲ್‌ನ ಪಟೇಲವಾಡದವರಾದ ಜಸ್ಪಾಲ್ ಸಿಂಗ್ ಕಸಾರಸಿಂಗ್ (59), ದಿಲೀಪ್ ಮಾರುತಿ ಯವನ (24) ಗಾಯಗೊಂಡವರು. ಗಾಯಾಳುಗಳಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು