ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಲೋಕಸಭಾ ಕ್ಷೇತ್ರ: 27 ನಾಮಪತ್ರಗಳಲ್ಲಿ ಮೂರು ತಿರಸ್ಕೃತ

Last Updated 5 ಏಪ್ರಿಲ್ 2019, 11:49 IST
ಅಕ್ಷರ ಗಾತ್ರ

ಕಾರವಾರ:ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಕೆಯಾದ ನಾಮಪತ್ರಗಳ‍‍ಪರಿಶೀಲನೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಒಟ್ಟು 17 ಅಭ್ಯರ್ಥಿಗಳಪೈಕಿಇಬ್ಬರ ನಾಮಪತ್ರಗಳು ತಿರಸ್ಕೃತವಾಗಿವೆ. ಒಬ್ಬರು ಸಲ್ಲಿಸಿದ ಮೂರು ನಾಮಪತ್ರಗಳ ಪೈಕಿ ಒಂದು ಕ್ರಮಬದ್ಧವಾಗಿಲ್ಲ. ಹೀಗಾಗಿ ಒಟ್ಟು 27 ನಾಮಪತ್ರಗಳಲ್ಲಿಮೂರು ತಿರಸ್ಕೃತಗೊಂಡಿವೆ.

ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಪ್ರಮೋದ ಮೋಹನ್ ಮಡಗಾಂವ್ಕರ್ ನೀಡಿದ್ದ 10 ಮಂದಿ ಸೂಚಕರಲ್ಲಿ ನಾಲ್ವರ ಹೆಸರು ಮತದಾರರ ಪಟ್ಟಿಯಲ್ಲಿಇಲ್ಲ. ಆದ್ದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ಶಿವಸೇನೆಯ ಅಭ್ಯರ್ಥಿ ಕೃಷ್ಣೋಜಿ ಪಾಟೀಲ್,ತಾವುರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡುತ್ತಿರುವುದಾಗಿನಾಮಪತ್ರದಲ್ಲಿ ನಮೂದಿಸಿದ್ದಾರೆ. ಅವರು ಒಬ್ಬರೇ ಸೂಚಕರ ಹೆಸರು ನೀಡಿದ್ದಾರೆ. ರಾಜ್ಯದಲ್ಲಿ ಶಿವಸೇನೆ ರಾಷ್ಟ್ರೀಯ ಪಕ್ಷವಲ್ಲ. ಹಾಗಾಗಿ ಅವರು 10 ಜನ ಸೂಚಕರನ್ನು ಹೆಸರಿಸಬೇಕಿತ್ತು. ಆದ್ದರಿಂದ ಅವರನಾಮಪತ್ರ ತಿರಸ್ಕೃತಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಬಾಲಕೃಷ್ಣ ಪಾಟೀಲ್ ಅವರ ಮೊದಲ ನಾಮಪತ್ರ ಸೂಚಕರ ಕೊರತೆಯಿಂದ ತಿರಸ್ಕೃತಗೊಂಡಿದೆ.ನಂತರ ಸಲ್ಲಿಸಿದ ಎರಡು ನಾಮಪತ್ರಗಳು ಪುರಸ್ಕೃತವಾಗಿದ್ದು ಉಮೇದುವಾರಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT