ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ಬಂದವರು 396 ಮಂದಿ

Last Updated 7 ಮೇ 2020, 14:13 IST
ಅಕ್ಷರ ಗಾತ್ರ

ಕಾರವಾರ:ಗೋವಾದಲ್ಲಿ ನೆಲೆಸಿರುವಕನ್ನಡಿಗರು ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಮೂಲಕ ವಾಪಸ್ ಬರುತ್ತಿದ್ದು, ಬುಧವಾರದಿಂದ ಒಟ್ಟು 396 ಜನರು ಮರಳಿದ್ದಾರೆ. ಬೇರೆ ಬೇರೆ ಬಸ್‌ಗಳಲ್ಲಿ ಅವರನ್ನು ಆಯಾ ತಾಲ್ಲೂಕು ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆ.

‘ಸೇವಾಸಿಂಧು’ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ್ದ ಒಟ್ಟು 172 ಜನರನ್ನುಚೆಕ್‌ಪೋಸ್ಟ್‌ನಲ್ಲಿ ಗುರುವಾರ ಒಳಗೆ ಸೇರಿಸಿಕೊಳ್ಳಲಾಗಿದೆ. ಈ ಪೈಕಿ 119 ಮಂದಿ ಉತ್ತರ ಕನ್ನಡ ಜಿಲ್ಲೆಯವರು, 53 ಜನರು ಗದಗ ಮತ್ತು ಧಾರವಾಡ ಜಿಲ್ಲೆಯವರು ಎಂದು ತಹಶೀಲ್ದಾರ್ ವಿ.ಆರ್.ಕಟ್ಟಿ ಮಾಹಿತಿ ನೀಡಿದ್ದಾರೆ. ‌ಚೆಕ್‌ಪೋಸ್ಟ್ ತೆರೆದ ಮೊದಲ ದಿನವಾದ ಬುಧವಾರ, ಉತ್ತರಕನ್ನಡದ 125 ಹಾಗೂ ಇತರ ಜಿಲ್ಲೆಗಳ 99 ಮಂದಿ ಬಂದಿದ್ದರು.

ಶಾಸಕಿ ಭೇಟಿ:ಮಾಜಾಳಿಗೆ ಗುರುವಾರ ತೆರಳಿದ ಶಾಸಕಿ ರೂಪಾಲಿ ನಾಯ್ಕ, ಜಿಲ್ಲೆಯ ಕಾರ್ಮಿಕರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಇದೇವೇಳೆ, ಮನೆಯಿಂದಅನವಶ್ಯಕವಾಗಿ ಹೊರಗಡೆ ಬರಬಾರದು. ಇನ್ನು ಕೆಲವು ತಿಂಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ಅಧಿಕಾರಿಗಳ ಆದೇಶವನ್ನು ಪಾಲಿಸುತ್ತ, ನೆಮ್ಮದಿಯಿಂದ ಕುಟುಂಬದವರ ಜೊತೆಗೆ ಕಾಲ ಕಳೆಯುವಂತೆ ಸೂಚಿಸಿದರು.

ಗೋವಾದಲ್ಲಿರುವ ಕನ್ನಡಿಗರು ಹಾಗೂ ಇತರ ರಾಜ್ಯಗಳ ನಾಗರಿಕರಿಗೆ ಜಿಲ್ಲೆಯ ಗಡಿ ಪ್ರವೇಶಕ್ಕೆ ಒಟ್ಟು ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಸಾವಿರಾರು ಮಂದಿ ತಮ್ಮ ಊರುಗಳಿಗೆ ತೆರಳಲು ಸಿದ್ಧರಾಗಿದ್ದು, ಮಾಜಾಳಿಯಲ್ಲಿ ಅವರ ವೈದ್ಯಕೀಯ ತಪಾಸಣೆ ನಡೆಸಿ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT