ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತೆಗೆ ನೆರವು: ಬಾಲಕನಿಗೆ ಪ್ರಶಂಸೆ

Last Updated 27 ಜನವರಿ 2020, 3:58 IST
ಅಕ್ಷರ ಗಾತ್ರ

ಶಿರಸಿ: ಬಹುವಿಧದ ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಯನ್ನು ನಿತ್ಯ ಶಾಲೆಗೆ ಕರೆದುಕೊಂಡು ಬಂದು ಕಾಯಕನಿಷ್ಠೆ ತೋರಿದ್ದ ಬಾಲಕನಿಗೆ ಹಿರಿಯ ಅಧಿಕಾರಿಯೊಬ್ಬರು ಬೆನ್ನುತಟ್ಟಿದ್ದಾರೆ.

ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ನಿರಂಜನ ಕಬ್ಬೇರ್ ನಿತ್ಯ ಶಾಲೆಗೆ ಬರುವಾಗ, ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದ ಸ್ನೇಹಿತೆ ಪ್ರಾರ್ಥನಾ ಗೌಡಳ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವಳನ್ನು ನಡೆಸಿ
ಕೊಂಡು ಶಾಲೆಗೆ ಕರೆತರುತ್ತಿದ್ದ. ಆಕೆ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ನಿತ್ಯವೂ ವ್ರತದಂತೆ ಪಾಲಿಸುತ್ತಿದ್ದ ಆತ, ಒಂದು ವರ್ಷದ ಹಿಂದೆ ಪ್ರಾರ್ಥನಾ ಅಸುನೀಗುವವರೆಗೂ ಮುಂದುವರಿಸಿದ್ದ. 'ಪ್ರಜಾವಾಣಿ’ ಕಳೆದ ನ.14ರ, ಮಕ್ಕಳ ದಿನಾಚರಣೆ
ಯಂದು ‘ಬಣ್ಣದ ಚಿಟ್ಟೆ’ ಶೀರ್ಷಿಕೆಯಡಿ, ಪರಿಚಯಿಸಿದ ಸಾಧಕ ಮಕ್ಕಳಲ್ಲಿ ನಿರಂಜನ ಕೂಡ ಒಬ್ಬನಾಗಿದ್ದ. ಈ ವರದಿ ಓದಿದ್ದ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ನಿರ್ದೇಶಕ ಕೆ.ರಾಜು ಮೊಗವೀರ, ವಿದ್ಯಾರ್ಥಿಯಲ್ಲಿರುವ ಮಾನವೀಯ ಮೌಲ್ಯ ಗುರುತಿಸಿ, ಆತನಿಗೆ ಪ್ರಶಂಸಾ ಪತ್ರ, ₹3,000 ಮೊತ್ತದ ಠೇವಣಿಪತ್ರ ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT