ಬುಧವಾರ, ಸೆಪ್ಟೆಂಬರ್ 18, 2019
28 °C

ಬಸ್‌–ಕಾರು ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

Published:
Updated:
Prajavani

ಶಿರಸಿ: ತಾಲ್ಲೂಕಿನ ಗಡಿಹಳ್ಳಿ ಕತ್ರಿ ಸಮೀಪ ಭಾನುವಾರ ಸಂಜೆ ಸಾರಿಗೆ ಸಂಸ್ಥೆ ಬಸ್ ಮತ್ತು ಓಮ್ನಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಓಮ್ನಿಯಲ್ಲಿದ್ದ ಕಸ್ತೂರಬಾ ನಗರದ ತನ್ವೀರ್ ಅಹಮ್ಮದ್ ಇಮಾಮ್ ಸಾಬ್ (18), ಮುಸ್ತಫಾ ಅಮಜದ್ ಶೇಖ್ (18) ಮೃತಪಟ್ಟವರು. ಫೈರೋಜ್‌ ಖಾನ್ ನಾಸಿರ್‌ಖಾನ್ (18), ಮಹಮ್ಮದ್ ಸೂಫಿಯಾನ್ (18), ಮಕಬೂಲಿ ಮೌಲಾರಿ (23) ಗಾಯಗೊಂಡವರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸ್ಥಿಪಂಜರವಾಗಿ ಪತ್ತೆ

ಶಿರಸಿ: ಕಳೆದ ತಿಂಗಳು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತಾಲ್ಲೂಕಿನ ನರಸಗಲ್‌ ಪಟ್ಟಣಹೊಳೆಯಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ. ನರಸಗದ್ದೆಯ ರಾಮಚಂದ್ರ ಗಣಪತಿ ಶೆಟ್ಟಿ (64) ಅವರು ಜುಲೈ 13ರಂದು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಭಾನುವಾರ ಇದೇ ವ್ಯಕ್ತಿಯ ಮೃತದೇಹ ಹೊಳೆಯಲ್ಲಿ ಸಿಕ್ಕಿದೆ. ದೇಹದ ಮೇಲಿರುವ ಬಟ್ಟೆಯ ಮೂಲಕ, ಅವರ ಪುತ್ರ ಗುರುತು ಪತ್ತೆ ಮಾಡಿದ್ದಾರೆ. ಗ್ರಾಮೀಣ ಠಾಣೆಯ ಪಿಎಸ್‌ಐ ಬಾಲಕೃಷ್ಣ ಪಾಲೇಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Post Comments (+)