ಶನಿವಾರ, ಡಿಸೆಂಬರ್ 14, 2019
24 °C

ಲಾರಿ ಹರಿದು ಕುರಿಗಾಹಿ ಮಹಿಳೆ, 27 ಕುರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಕಲಘಟಗಿಯಿಂದ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯೊಂದು ಹರಿದ ಪರಿಣಾಮ ಮಹಿಳೆ ಮತ್ತು 27 ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಜನಗಶ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತ ಮಹಿಳೆಯನ್ನು ಶೋಭಾ ಯಲ್ಲಪ್ಪ ಕರಿಗಾರ‌ (20) ಎಂದು ಗುರುತಿಸಲಾಗಿದೆ. ಕುರಿಗಾಹಿಯಾಗಿರುವ ಅವರು, ಗೋಕಾಕದಿಂದ ಕುರಿಗಳನ್ನು ಮೇಯಿಸುತ್ತ ಸಾಗುತ್ತಿದ್ದರು. ಆರು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.  ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು