ಶುಕ್ರವಾರ, ಡಿಸೆಂಬರ್ 13, 2019
26 °C

ದನದ ಮಾಂಸ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಹೊಳೆಯ ಅಂಚಿಗೆ ಮೇಯುತ್ತಿದ್ದ ದನಗಳನ್ನು ಕದ್ದು, ಮಾಂಸದ ತುಂಡುಗಳನ್ನಾಗಿ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಇಲ್ಲಿನ ಚಿಪಗಿ ಚೆಕ್‌ಪೋಸ್ಟ್‌ ಬಳಿ ಭಾನುವಾರ ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು, ಬಂಧಿತರಿಂದ 2.30 ಕ್ವಿಂಟಲ್ ಮಾಂಸ ವಶಪಡಿಸಿಕೊಂಡಿದ್ದಾರೆ.

ಹಾವೇರಿಯ ಬ್ಯಾಡಗಿ ಇಸ್ಲಾಂಪುರದ ತಬ್ರೇಜ್ ಹನೀಫ್ (36), ಬ್ಯಾಡಗಿ ಶಿವಪುರ ಬಡಾವಣೆಯ ವಾಸುದೇವ ಹರಕೇರಿ (29) ಬಂಧಿತರು. ಆರೋಪಿಗಳು ಹಾನಗಲ್ ಸಂಗೂರು ಹೊಳೆಯ ಸಮೀಪ ಮೇಯುತ್ತಿದ್ದ ದನಗಳನ್ನು ಕಳುವು ಮಾಡಿ, ಅವುಗಳನ್ನು ಕಡಿದು ಕಾರಿನಲ್ಲಿ ಭಟ್ಕಳದ ಮದುವೆಯೊಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಮಾಂಸ ಸಾಗಾಟಕ್ಕೆ ಬಳಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

 

ಪ್ರತಿಕ್ರಿಯಿಸಿ (+)