ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕಾಂಬಾ, ಸಹಸ್ರಲಿಂಗಕ್ಕೆ ಶಿವರಾಜಕುಮಾರ್ ಭೇಟಿ

Last Updated 27 ಮೇ 2022, 15:44 IST
ಅಕ್ಷರ ಗಾತ್ರ

ಶಿರಸಿ: ಚಿತ್ರೀಕರಣದಲ್ಲಿ ಸದಾ ಬ್ಯುಸಿಯಾಗಿರುವ ಸ್ಯಾಂಡಲ್‍ವುಡ್ ಹಿರಿಯ ನಟ ಶಿವರಾಜಕುಮಾರ್ ಶುಕ್ರವಾರ ಕುಟುಂಬ ಸಮೇತರಾಗಿ ಇಲ್ಲಿನ ಮಾರಿಕಾಂಬಾ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು ಹಾಗೂ ಸಂಬಂಧಿಕರ ಮನೆಗೆ ಭೇಟಿ ನೀಡಿದರು.

ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಪ್ರಿಯಾ ಇಂಟರನ್ಯಾಷನಲ್ ಹೋಟೆಲ್ ಉದ್ಘಾಟನೆಗೆ ಗುರುವಾರ ಆಗಮಿಸಿದ್ದ ಅವರು ಎರಡು ದಿನ ಶಿರಸಿಯಲ್ಲಿ ಕಾಲ ಕಳೆದರು.

ಹೋಟೆಲ್‌ ಉದ್ಘಾಟನೆ ಬಳಿಕ ಅಭಿಮಾನಿಗಳೊಂದಿಗೆ ಖುಷಿಯಾಗಿ ಸಮಯ ಕಳೆದಿದ್ದ ಅವರು, ಸಂಜೆ ಪ್ರವಾಸಿ ತಾಣ ಸಹಸ್ರಲಿಂಗಕ್ಕೆ ಭೇಟಿ ನೀಡಿದ್ದರು. ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದ್ದರು. ಸಮೀಪದ ಸಂಬಂಧಿ ಭೀಮಣ್ಣ ನಾಯ್ಕ ಅವರ ಮಳಲಗಾಂವ ಗ್ರಾಮದ ಮೂಲಮನೆಗೂ ಭೇಟಿ ನೀಡಿದ್ದರು. ಅಡಿಕೆ ತೋಟ, ಗದ್ದೆಯಲ್ಲಿ ಓಡಾಡಿ ಖುಷಿಯಾಗಿ ಕಾಲ ಕಳೆದರು.

ಈ ವೇಳೆ ಪತ್ನಿ ಗೀತಾ ಶಿವರಾಜಕುಮಾರ್, ಮಾಜಿ ಶಾಸಕ ಮಧು ಬಂಗಾರಪ್ಪ, ಅನಿತಾ ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ, ಅಶ್ವಿನ್ ನಾಯ್ಕ, ಗೀತಾ ನಾಯ್ಕ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT