ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಜೀವನದ ಸಂಸ್ಕಾರ: ಡಾ.ಶಾಜಿ

Last Updated 19 ಡಿಸೆಂಬರ್ 2018, 15:28 IST
ಅಕ್ಷರ ಗಾತ್ರ

ಕಾರವಾರ: ಅಲ್ಲಿ ಸಣ್ಣಗಾತ್ರದಿಂದ ಹಿಡಿದು ಬಂಡೆಗಲ್ಲಿನಷ್ಟು ದೊಡ್ಡದಾದ ಗೆಡ್ಡೆಗಳಿದ್ದವು. ಎರಡು ಮೂರು ಅಡಿಗಳಷ್ಟು ಉದ್ದದ ಗೆಡ್ಡೆಗಳನ್ನು ನೋಡಿ ಜನ ಅಚ್ಚರಿಪಟ್ಟರು.

ಜೊಯಿಡಾದಲ್ಲಿ ಬುಧವಾರ ಆಯೋಜಿಸಲಾದ ಗೆಡ್ಡೆ ಗೆಣಸು ಮೇಳ ಅಲ್ಲಿಗೆ ಬಂದವರಿಗೆಕೃಷಿ ಚಟುವಟಿಕೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿತು.

ಆದಿಶಕ್ತಿ ಕುಣಬಿ ಮಹಿಳಾ ಅಭಿವೃದ್ದಿ ಟ್ರಸ್ಟ್, ಸಂಜೀವಿನಿ ಸೇವಾ ಟ್ರಸ್ಟ್, ಕಾಡುಮನೆ ಹೋಮ್ ಸ್ಟೇ, ಪ್ರಕೃತಿ ಶಿರಸಿ, ಸೂಪಾ ಚಾರಿಟಬಲ್ಫೌಂಡೇಷನ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೇಟಿ ಹಳಿಯಾಳ, ಗೆಡ್ಡೆ ಗೆಣಸು ಬೆಳೆಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೇಳವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೆಡ್ಡೆ ಗೆಣಸು ಕೃಷಿಕ ಕೇರಳದ ಡಾ.ಶಾಜಿ, ‘ಗೆಡ್ಡೆ ಗೆಣಸು ಆಹಾರ ಮಾತ್ರವಲ್ಲ ಔಷಧವೂ ಹೌದು. ಕೃಷಿ ಒಂದು ಸಂಸ್ಕಾರ. ಅದನ್ನು ಉಳಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾನು ಒಂದು ಎಕರೆ ಪ್ರದೇಶದಲ್ಲಿ 202 ತಳಿಗಳ ಗೆಡ್ಡೆ ಗೆಣಸು ಬೆಳೆಯುತ್ತಿದ್ದೇನೆ. ಒಂದು ಗುಂಟೆ ಜಮೀನು ಇದ್ದರೂ ಈ ಬೆಳೆಯನ್ನು ಬೆಳೆದು ಆದಾಯ ಗಳಿಸಬಹುದು’ ಎಂದರು.

ಕೃಷಿ ವಿಜ್ಞಾನಿಗಳಾದ ಬಾಲಚಂದ್ರ ಹೆಗಡೆ, ಎಂ.ಮಂಜು ಹಾಗೂ ಹಳಿಯಾಳದ ರುಡ್‌ಸೆಟಿ ನಿರ್ದೇಶಕ ನಿತ್ಯಾನಂದ ವೈದ್ಯಮಾತನಾಡಿದರು.

ಆದಿಶಕ್ತಿ ಕುಣಬಿ ಮಹಿಳಾ ಅಭಿವೃದ್ದಿ ಟ್ರಸ್ಟ್‌ಅಧ್ಯಕ್ಷೆ ದಿವ್ಯಾನಿ ಗಾವಡಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ‘ಪ್ರಕೃತಿ’ ಶಿರಸಿಯ ಪಾಂಡುರಂಗ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ ಪಿ.ಐ.ಮಾನೆ ಇದ್ದರು. ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಗಾವಡಾ ಸ್ವಾಗತಿಸಿದರು. ಸಚಿನ್ತಳೇಕರ್ ಕಾರ್ಯಕ್ರಮ ನಿರೂಪಿಸಿದರು.

ಐದನೇ ವರ್ಷದ ಈ ಮೇಳದಲ್ಲಿ 122 ರೈತರು, ಮಹಿಳೆಯರು ಪಾಲ್ಗೊಂಡಿದ್ದರು.46ಪ್ರಭೇದಗಳಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂಮಾರಾಟ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT