ಶನಿವಾರ, ಜುಲೈ 31, 2021
27 °C

ಬನವಾಸಿಯ ಕೆನರಾ ಬ್ಯಾಂಕ್‌ನಲ್ಲಿ ಹೊರರಾಜ್ಯ ಸಿಬ್ಬಂದಿ ಒರಟು ವರ್ತನೆ: ಸಂಘಟನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಬನವಾಸಿಯ ಕೆನರಾ ಬ್ಯಾಂಕ್ (ಸಿಂಡಿಕೇಟ್ ಬ್ಯಾಂಕ್) ಶಾಖೆಯಲ್ಲಿ ಹೊರ ರಾಜ್ಯದ ಸಿಬ್ಬಂದಿ ಸ್ಥಳೀಯ ಗ್ರಾಹಕರೊಡನೆ ಒರಟಾಗಿ ವರ್ತಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಶಾಖಾ ಮುಖ್ಯಸ್ಥರು ಗಮನ ಹರಿಸುತ್ತಿಲ್ಲ ಎಂದು ‘ನಾವು ಕನ್ನಡಿಗರು’ ಸಂಘಟನೆ ಅಧ್ಯಕ್ಷ ಗಣೇಶ ಭಟ್ಟ ಉಪ್ಪೋಣಿ ಆರೋಪಿಸಿದ್ದಾರೆ.

ಜುಲೈ 7ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಠೇವಣಿ ಹಣ ಪಡೆಯಲು ಬಂದಿದ್ದ ವೃದ್ಧರೊಬ್ಬರ ಬಳಿ ಶಾಖೆಯ ಹೊರ ರಾಜ್ಯದ ಸಿಬ್ಬಂದಿ ಉಡಾಫೆ ವರ್ತನೆ ತೋರಿದ್ದಾರೆ. ಕನ್ನಡಿಗರ ಉದ್ಯೋಗ ಕಬಳಿಸಿ ಇಲ್ಲಿಗೆ ಬಂದಿರುವ ಹೊರರಾಜ್ಯದ ಸಿಬ್ಬಂದಿಯ ಉದಾಸೀನ ವರ್ತನೆ ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ. ಹೊರ ರಾಜ್ಯದ ಸಿಬ್ಬಂದಿಯನ್ನು ಆದಷ್ಟು ಬೇಗ ವರ್ಗಾವಣೆ ಮಾಡಿ, ಕನ್ನಡಿಗ ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲಿವಾದಲ್ಲಿ ಮುಂದೆ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಘಟನೆಯ ಸಂದರ್ಭದಲ್ಲಿ ಶಾಖೆಯಲ್ಲಿದ್ದ ಸಂಘಟನೆಯ ಸಂಚಾಲಕ ಪ್ರಸನ್ನ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು