ತಾಕತ್ತಿದ್ದರೆ 5ತಿಂಗಳಲ್ಲಿ ಪಾಸ್‌ಪೋರ್ಟ್ ಕೇಂದ್ರ ಶಂಕುಸ್ಥಾಪನೆ ಮಾಡಿ–ಅಸ್ನೋಟಿಕರ್

7
ಸಚಿವ ಅನಂತಕುಮಾರ್‌ಗೆ ಸವಾಲು

ತಾಕತ್ತಿದ್ದರೆ 5ತಿಂಗಳಲ್ಲಿ ಪಾಸ್‌ಪೋರ್ಟ್ ಕೇಂದ್ರ ಶಂಕುಸ್ಥಾಪನೆ ಮಾಡಿ–ಅಸ್ನೋಟಿಕರ್

Published:
Updated:
Deccan Herald

ಕಾರವಾರ: ‘ಅಂಕೋಲಾದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ತೆರೆಯುವುದಾಗಿ ಸಚಿವ ಅನಂತಕುಮಾರ್ ಹೆಗಡೆ ಶಿರಸಿಯಲ್ಲಿ ಗುರುವಾರ ಹೇಳಿಕೆ ನೀಡಿದ್ದಾರೆ. ಅದರಂತೆ, ತಾಕತ್ತಿದ್ದರೆ ಐದು ತಿಂಗಳಲ್ಲಿ ಅದಕ್ಕೆ ಶಂಕುಸ್ಥಾಪನೆ ಮಾಡಲಿ ನೋಡೋಣ’ ಎಂದು ಜೆಡಿಎಸ್‌ ಮುಖಂಡ ಆನಂದ್ ಅಸ್ನೋಟಿಕರ್ ಸವಾಲೆಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪ್ರತಿ ಬಾರಿಯೂ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ವಿರುದ್ಧ ಹಗುರವಾಗಿ, ಕೆಟ್ಟದಾಗಿ ಮಾತನಾಡುತ್ತಿದ್ದರು. ಇದೀಗ ಮಾಧ್ಯಮದವರಿಗೂ ‘ನೀವು ಏನು ಬರೆದುಕೊಳ್ಳುತ್ತಿರೋ ಬರೆದುಕೊಳ್ಳಿ’ ಎಂದು ಉಡಾಫೆಯಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಮಾಧ್ಯಮದವರೆಂದರೆ ಏನು ಬೇಕಾದರು ಬರೆದುಕೊಳ್ಳುವವರು ಎಂದುಕೊಂಡಿದ್ದೀರಾ?’ ಎಂದು ಪ್ರಶ್ನಿಸಿದರು.

‘ಐದು ಬಾರಿ ಗೆದ್ದ ಸಂಸದರು ಏನು ಮಾಡಿದ್ದಾರೆ ಎನ್ನುವುದನ್ನು ಜಿಲ್ಲೆಯ ಹಿಂದುಳಿದ ಯುವಕರು ಅವರಿಗೆ ಕೇಳಬೇಕು. ಸಂಸದರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಸಮಿತಿ ಇದೆ. ಐದು ವರ್ಷಗಳಲ್ಲಿ ಅವರು ಈ ಬಗ್ಗೆ ಎಷ್ಟು ಸಭೆ ನಡೆಸಿದ್ದಾರೆ? ಎಷ್ಟು ಸಮೀಕ್ಷೆ ಮಾಡಿದ್ದಾರೆ?’ ಎಂದ ಅವರು, ‘ರಾಜಕೀಯದಿಂದಲೇ ಅನಂತಕುಮಾರ ಅವರನ್ನು ಹೊರ ಹಾಕಬೇಕಿದೆ. ಈ ಸಾರಿ ಬದಲಾವಣೆ ತರಬೇಕು. ಹಿಂದುಳಿದ ವರ್ಗದವರೆಲ್ಲ ಒಟ್ಟಾಗಬೇಕಿದೆ’ ಎಂದರು.

‘ಅವಕಾಶ ಕೊಟ್ಟರೆ ಅಭ್ಯರ್ಥಿ ಆಗುವೆ’: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ನೊಂದಿಗೆ ಸಭೆಗಳಾಗುತ್ತಿವೆ. ಅಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಂದುವೇಳೆ ಹೊಂದಾಣಿಕೆ ಮಾಡಿಕೊಂಡರೆ, ಜಿಲ್ಲೆಯಲ್ಲಿ ಜೆಡಿಎಸ್‌ಗೆ ಸ್ಪರ್ಧಿಸಲು ಅವಕಾಶ ಕೊಟ್ಟರೆ ಅಭ್ಯರ್ಥಿ ಆಗುತ್ತೇನೆ. ಕಾಂಗ್ರೆಸ್‌ಗೆ ಕೊಟ್ಟರೆ ಬೆಂಬಲಿಸುತ್ತೇನೆ’ ಎಂದು ಆನಂದ ಅಸ‌್ನೋಟಿಕರ್ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !