ನಾಮಪತ್ರ ಸಲ್ಲಿಕೆ ಹಿನ್ನೆಲೆ: ದೇವರ ಮೊರೆ ಹೋದ ಹೆಗಡೆ

ಶನಿವಾರ, ಏಪ್ರಿಲ್ 20, 2019
29 °C

ನಾಮಪತ್ರ ಸಲ್ಲಿಕೆ ಹಿನ್ನೆಲೆ: ದೇವರ ಮೊರೆ ಹೋದ ಹೆಗಡೆ

Published:
Updated:
Prajavani

ಶಿರಸಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಏ.2ರಂದು ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರು, ಕುಟುಂಬ ಸಮೇತರಾಗಿ ಸೋಮವಾರ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ರೂಪಾ ಹೆಗಡೆ ಹಾಗೂ ಮಕ್ಕಳೊಂದಿಗೆ ಬನವಾಸಿ ಮಧುಕೇಶ್ವರ, ಗುಡ್ನಾಪುರದ ಬಂಗಾರೇಶ್ವರ, ಶಿರಸಿಯ ಮಾರಿಕಾಂಬೆ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರಸ್ತುತ ಚುನಾವಣೆ ಪ್ರಜಾತಂತ್ರದ ವಿಶಿಷ್ಟ ಚುನಾವಣೆ. ದೇಶಕ್ಕೆ ಹೊಸ ದಿಕ್ಕು ಸಿಗುತ್ತಿರುವ ಚುನಾವಣೆ. ರಾಷ್ಟ್ರೀಯ ಅಸ್ಮಿತೆ ಆಧಾರದ ಮೇಲೆ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದೇವೆ. ಈ ಕ್ಷೇತ್ರದ ಜನರ ಆಶೀರ್ವಾದ ಇರಲಿ ಎನ್ನುವ ಬೇಡಿಕೆ ನನ್ನದು. ಉತ್ತರ ಕನ್ನಡದಲ್ಲಿ ಹೆಚ್ಚಿನ ಬಹುಮತದೊಂದಿಗೆ ಬಿಜೆಪಿ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರದಲ್ಲೂ ಬಿಜೆಪಿ‌ ಬಹುಮತದಿಂದ ಅಧಿಕಾರ ಹಿಡಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಪ್ರಮುಖರಾದ ಗಣಪತಿ ನಾಯ್ಕ, ನಂದನ್ ಸಾಗರ, ರವಿ ಚಂದಾವರ, ಕೃಷ್ಣ ಎಸಳೆ, ಚಂದ್ರು ದೇವಾಡಿಗ, ಆರ್.ವಿ. ಹೆಗಡೆ, ರಿತೇಶ ಕೆ., ರೇಖಾ ಹೆಗಡೆ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !