ಸಿದ್ದಾಪುರ ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯ

7
ಕೇಂದ್ರ ರೈಲ್ವೆ ಸಚಿವರ ಭೇಟಿ

ಸಿದ್ದಾಪುರ ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯ

Published:
Updated:
Deccan Herald

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಸುಲಭದಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಬಹುದಾಗ ಅವಕಾಶವನ್ನು ಆದ್ಯತೆಯಲ್ಲಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸಿದರು.

ಮಂಗಳವಾರ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಅನಂತಕುಮಾರ ಹೆಗಡೆ, ತಾಳಗುಪ್ಪದಿಂದ 18 ಕಿ.ಮೀ ದೂರದಲ್ಲಿರುವ ಸಿದ್ದಾಪುರದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಸರ್ವೆ ಕಾರ್ಯ ಮುಗಿದಿದೆ. ತಾಳಗುಪ್ಪ-ಸಿದ್ದಾಪುರ ನಡುವೆ ಭೂಮಿಯ ಮೇಲ್ಮೈ ಬಹುಮಟ್ಟಿಗೆ ಸಮತಟ್ಟಾಗಿದ್ದು, ಸುಲಭದಲ್ಲಿ ರೈಲು ಮಾರ್ಗ ನಿರ್ಮಿಸಬಹುದು ಎಂದು ತಿಳಿಸಿದರು.

ಸಿದ್ದಾಪುರದಿಂದ ಬೆಂಗಳೂರು ಮತ್ತು ಮೈಸೂರಿಗೆ ನೇರ ಸಂಪರ್ಕ ದೊರೆಯಲಿರುವ ಈ ರೈಲು ಮಾರ್ಗದಿಂದಾಗಿ ಸಾರ್ವಜನಿಕರಿಗಾಗುವ ಅನುಕೂಲ ದೊಡ್ಡದು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರಕಲಿದೆ. ಗೂಡ್ಸ್ ರೈಲುಗಳೂ ಈ ಮಾರ್ಗದಲ್ಲಿ ಓಡಾಡುವಂತಾದರೆ ವ್ಯಾಪಾರ, ಉದ್ಯೋಗಗಳ ಬೆಳವಣಿಗೆಗೂ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !