ಜಲಬಂಧಿಯಾದ ಜಾನುವಾರು ರಕ್ಷಣೆ

7
ಮುಂದುವರಿದ ಕಾರ್ಯಾಚರಣೆ

ಜಲಬಂಧಿಯಾದ ಜಾನುವಾರು ರಕ್ಷಣೆ

Published:
Updated:
Deccan Herald

ಜೊಯಿಡಾ (ದಾಂಡೇಲಿ): ತಾಲ್ಲೂಕಿನ ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶದ ದೋಣಪಾ ನಡುಗಡ್ಡೆಯಲ್ಲಿ ಜಲಬಂಧಿಯಾಗಿರುವ ಆರು ಜಾನುವಾರುಗಳನ್ನು, ನಿರಂತರ ಆರು ತಾಸು ಕಾಲ ಶ್ರಮಿಸಿ, ತಾಲ್ಲೂಕು ಆಡಳಿತ ರಕ್ಷಣೆ ಮಾಡಿದೆ. ಇನ್ನುಳಿದ 16 ಜಾನುವಾರುಗಳ ರಕ್ಷಣೆ ಕಾರ್ಯ ಮುಂದುವರಿದಿದೆ.

ದೊಣಪಾದಲ್ಲಿ ನಿರ್ಮಾಣಗೊಂಡ ನಡುಗಡ್ಡೆಯಲ್ಲಿ 22 ಜಾನುವಾರುಗಳು ಸಿಲುಕಿಕೊಂಡಿದ್ದವು. ಮೆಸ್ತಬಿರೋಡಾ ಗ್ರಾಮದ ಮಾಲೀಕರು ತಾಲ್ಲೂಕು ಆಡಳಿತಕ್ಕೆ ಮನವಿಯನ್ನು ನೀಡಿ, ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಜಾನುವಾರುಗಳ ರಕ್ಷಣೆ ಮಾಡಬೇಕೆಂದು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಸಿದ್ಧತೆ ಮಾಡಿಕೊಂಡಿದ್ದ ತಾಲ್ಲೂಕು ಆಡಳಿತ ದೋಣಿ ಹಾಗೂ ಈಜುಗಾರರನ್ನು ಕರೆಯಿಸಿತ್ತು.

ಶುಕ್ರವಾರ ಬೆಳಿಗ್ಗೆ ಬೋಟ್ ಮೂಲಕ ನಡುಗಡೆಗೆ ತೆರಳಿದ ತಹಶೀಲ್ದಾರ್ ಸಂಜಯ ಕಾಂಬ್ಳೆ ನೇತೃತ್ವದ ತಂಡವು ಸತತ ಶ್ರಮಿಸಿ, ಆರು ಜಾನುವಾರುಗಳನ್ನು ರಕ್ಷಿಸಿದೆ. ಬಾಪೇಲಿ ನಡುಗಡ್ಡೆಯಲ್ಲಿ ಸಿಲುಕಿರುವ ಜಾನುವಾರು ರಕ್ಷಣೆಗೆ ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಅಧಿಕಾರಿಗಳ ಜೊತೆಯಲ್ಲಿ ಸ್ಥಳೀಯ 25ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ನಡುಗಡ್ಡೆಯಲ್ಲಿದ್ದ ಜಾನುವಾರು ಹಿಡಿಯಲು ಸಿಗದೇ ಓಡುತ್ತಿದ್ದವು. ಹೀಗಾಗಿ, ಎಲ್ಲವನ್ನೂ ಹಿಡಿಯಲು ಸಾಧ್ಯವಾಗಿಲ್ಲ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು ತಿಳಿಸಿದರು. ಪಶುವೈಧ್ಯಾಧಿಕಾರಿ ಲಮಾಣಿ, ಗ್ರಾಮ ಪಂಚಾಯ್ತಿಯ ಸಂತೋಷ ಮಂಥೆರೊ, ಗ್ರಾಮ ಲೆಕ್ಕಾಧಿಕಾರಿ ಶಂಕರ, ನಾಗೊಡಾ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ದೇವಾನಂದ ದೇಸಾಯಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !