ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ ಅರ್ಬನ್ ಬ್ಯಾಂಕಿಗೆ ₹ 54.91 ಲಕ್ಷ ನಿವ್ವಳ ಲಾಭ

Last Updated 6 ಡಿಸೆಂಬರ್ 2021, 16:15 IST
ಅಕ್ಷರ ಗಾತ್ರ

ಅಂಕೋಲಾ: 2020-21ನೇ ಸಾಲಿನಲ್ಲಿ ದಿ. ಅಂಕೋಲಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ₹ 54.91 ಲಕ್ಷ ನಿವ್ವಳ ಲಾಭಗಳಿಸಿದೆ. ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಶಿಫಾರಸ್ಸು ಮಾಡಿದೆ. ಜಿಲ್ಲಾ ಮಟ್ಟದ ಅತ್ಯುತ್ತಮ ಬ್ಯಾಂಕ್‌ ಎಂದು ಕೆ.ಡಿ.ಸಿ.ಸಿ.ಬ್ಯಾಂಕ್ ಕಳೆದ ವರ್ಷ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ್ ಹೇಳಿದರು.

ಇಲ್ಲಿಯ ಅರ್ಬನ್ ಬ್ಯಾಂಕಿನ ಪ್ರಧಾನ ಕಚೇರಿ ಸಭಾಭವನದಲ್ಲಿ ಭಾನುವಾರ 108ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ದೇಶಕ ರಾಜೇಂದ್ರ ಎಸ್.ಶೆಟ್ಟಿ
ಮಾತನಾಡಿದರು. ಷೇರುದಾರರಾದ ಉಮೇಶ ನಾಯ್ಕ, ಆರ್.ಟಿ. ಮಿರಾಶಿ, ಎಚ್.ಎನ್.ನಾಯಕ, ರಮಾನಂದ ನಾಯಕ, ಅರುಣ ನಾಡಕರ್ಣಿ ಸಭೆಯಲ್ಲಿ ಚರ್ಚೆಸಿದರು.

ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಭೈರವ ನಾಯ್ಕ, ನಿರ್ದೇಶಕರಾದ ಗೋವಿಂದರಾಯ ನಾಯ್ಕ, ಕೃಷ್ಣಾನಂದ ಶೆಟ್ಟಿ, ಚಂದ್ರಕಾಂತ ನಾಯ್ಕ, ನಾಗಾನಂದ ಬಂಟ, ಪ್ರಕಾಶ ಕುಂಜಿ, ಪ್ರಭಾ ಹಬ್ಬು, ಅನುರಾಧ ನಾಯ್ಕ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರವೀಂದ್ರ ಪಿ.ವೈದ್ಯ ವರದಿ ವಾಚಿಸಿ, ನಿರ್ವಹಿಸಿದರು. ರಾಜೇಂದ್ರ ಶೆಟ್ಟಿ ವಂದಿಸಿದರು. ಬ್ಯಾಂಕ್ ಸಿಬ್ಬಂದಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT