ಶನಿವಾರ, ನವೆಂಬರ್ 23, 2019
17 °C
ಬಿಜೆಪಿ ಹಿಡಿತಕ್ಕೆ ಶಿರಸಿ ಎಪಿಎಂಸಿ

ವಿಶ್ವನಾಥ–ವಿಮಲಾ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆ

Published:
Updated:
Prajavani

ಶಿರಸಿ: ಇಲ್ಲಿನ ಎಪಿಎಂಸಿಗೆ ಎರಡನೇ ಅವಧಿಯ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ, ಉಪಾಧ್ಯಕ್ಷೆಯಾಗಿ ವಿಮಲಾ ಹೆಗಡೆ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಶ್ವನಾಥ ಹೆಗಡೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಕುಮಾರ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಮಲಾ ಹೆಗಡೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಧನಂಜಯ ಸಾಕಣ್ಣನವರ್ ನಾಮಪತ್ರ ಸಲ್ಲಿಸಿದ್ದರು. 

ಕಾಂಗ್ರೆಸ್ ಸದಸ್ಯರ ಬಲ ಕೇವಲ ಮೂರು ಇದ್ದ ಕಾರಣ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಬಿಜೆಪಿ ಮುಖಂಡ ಒತ್ತಡಕ್ಕೆ ಬಗ್ಗದ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲಿಲ್ಲ. ನಂತರ ನಡೆದ ಚುನಾವಣೆಯಲ್ಲಿ ವಿಶ್ವನಾಥ ಎಂಟು ಮತ ಪಡೆದರೆ, ಪ್ರತಿಸ್ಪರ್ಧಿ ಏಳು ಮತ ಹಾಗೂ ವಿಮಲಾ ಹೆಗಡೆ ಒಂಬತ್ತು ಮತ ಪಡೆದರೆ, ಪ್ರತಿಸ್ಪರ್ಧಿ ಆರು ಮತ ಪಡೆದರು.

ಮೂವರು ನಾಮನಿರ್ದೇಶಿತ ಸದಸ್ಯರು ಸೇರಿ, 17 ಸದಸ್ಯರನ್ನು ಒಳಗೊಂಡಿರುವ ಎಪಿಎಂಸಿಯಲ್ಲಿ, ಒಬ್ಬರು ಸ್ಥಾನದಿಂದ ಅನರ್ಹಗೊಂಡಿದ್ದರೆ, ಇನ್ನೊಂದು ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಹೀಗಾಗಿ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ 15 ಸದಸ್ಯರು ಭಾಗವಹಿಸಿದ್ದರು.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಇದ್ದರು.

ಪ್ರತಿಕ್ರಿಯಿಸಿ (+)