ಶಿರಸಿ: ಮತ ಕೇಳಲು ಹೋದ ಅಭ್ಯರ್ಥಿ ಮೇಲೆ ಹಲ್ಲೆ
ಶಿರಸಿ: ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಮತ ಕೇಳಲು ಹೋದಾಗ ಅವರ ಮೇಲೆ ಹಲ್ಲೆ ನಡೆದ ಘಟನೆ ಬುಧವಾರ ರಾತ್ರಿ ತಾಲ್ಲೂಕಿನ ಕುಪಗಡ್ಡೆಯಲ್ಲಿ ನಡೆದಿದೆ.
ಬೆಳ್ಳನಕೇರಿಯ ಗಣೇಶ ಕ್ಷತ್ರೀಯ ಹಲ್ಲೆಗೊಳಗಾದ ಅಭ್ಯರ್ಥಿ. ಪ್ರಚಾರಕ್ಕೆ ತೆರಳಿದ್ದಾಗ ಕುಪಗಡ್ಡೆಯ ಮರ್ದಾನ ಜಬ್ಬಾರಸಾಬ ಶೇಖ್, ಅಬ್ದುಲಜಬ್ಬಾರ ಮರ್ದಾನಸಾಬ ಶೇಖ್, ನಾಸಿರ ಜಬ್ಬಾರಸಾಬ ಶೇಖ್ ಮತ್ತು ಸದ್ದಾಂ ಜಬ್ಬಾರಸಾಬ ಶೇಖ್ ತಮ್ಮ ಮೇಲೆ ನಡೆಸಿದರು.
ಜೀವ ಬೆದರಿಕೆಯನ್ನೂ ಒಡ್ಡಿದರು ಎಂದು ಗಣೇಶ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಬನವಾಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.