ಮಂಗಳವಾರ, ಡಿಸೆಂಬರ್ 10, 2019
19 °C

ಬನವಾಸಿಯಲ್ಲಿ ಲಕ್ಷ ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬನವಾಸಿ: ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಗುರುವಾರ ಲಕ್ಷ ದೀಪೋತ್ಸವವು ವೈಭವದಿಂದ ನೆರವೇರಿತು. ಭಕ್ತರು ದೇವಾಲಯದ ಸುತ್ತ ದೀಪ ಬೆಳಗಿ, ಮಧುಕೇಶ್ವರನಿಗೆ ನಮಿಸಿದರು. ದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಮಹಾರುದ್ರ ಹವನ ನಡೆಯಿತು. ಕ್ಷೇತ್ರದ ಹಿರಿಯ ವೈದಿಕ ಗುರುನಾಥ ದೀಕ್ಷಿತ ಮತ್ತು ಸಾವಿತ್ರಿ ದೀಕ್ಷಿತ ದಂಪತಿ, ದೇವಾಲಯಕ್ಕೆ ₹ 60ಸಾವಿರ ದೇಣಿಗೆ ನೀಡಿದರು.

ವೈದಿಕರಾದ ಪಶುಪತಿ ಶಾಸ್ತ್ರಿ, ನಾಗೇಂದ್ರ ಪತ್ರೆ, ಶ್ರೀನಿಧಿ ಮಂಗಳೂರು, ಸುರೇಶ ಪುರೋಹಿತ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್, ಉಪಾಧ್ಯಕ್ಷ ಶಿವಾನಂದ ದೀಕ್ಷಿತ, ಧರ್ಮದರ್ಶಿಗಳಾದ ಜಿ.ಎ.ಹೆಗಡೆ ಸೋಂದಾ, ಹನುಮಂತಪ್ಪ ಮಡ್ಲೂರು, ಗೀತಾ ಯಜಮಾನ, ಮಂಗಳಾ ದಾವಣಗೇರಿ, ವ್ಯವಸ್ಥಾಪಕ ಅಭಿಯಾನಂದ ಇದ್ದರು.

ಪ್ರತಿಕ್ರಿಯಿಸಿ (+)